ಬೆಳಾಲು : ಅನಂತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಸಮಾಲೋಚನ ಸಭೆ

Advt_NewsUnder_1
Advt_NewsUnder_1
Advt_NewsUnder_1

belel anantheshwara temple samalochana sabhe copy ಬೆಳಾಲು : ಬೆಳಾಲು ಗ್ರಾಮದ ಅನಂತೋಡಿಯಲ್ಲಿ ಅಜೀರ್ಣವಸ್ಥೆಯಲ್ಲಿರುವ ಶ್ರೀ ಅನಂತೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡುವರೇ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಬೆಳಾಲು, ಶ್ರೀ ಅನಂತೇಶ್ವರ ಭಜನಾ ಮಂಡಳಿ ಹಾಗೂ ಊರ ಭಕ್ತಾಧಿಗಳ ಸಭೆಯು ಜು.5ರಂದು ಜರುಗಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ತಾಲೂಕು ಯೋಜನಾಧಿಕಾರಿ ಶ್ರೀಮತಿ ರೂಪಾ ಜೈನ್, ಉಜಿರೆಯ ವಲಯದ ಮೇಲ್ವಿಚಾರಕರಾದ ಸತೀಶ್, ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪಿ.ತಿಮ್ಮಪ್ಪ ಗೌಡ, ಜನಜಾಗೃತಿ ವೇದಿಕೆ ಗ್ರಾಮ ಸಮಿತಿ ಅಧ್ಯಕ್ಷ ಎನ್. ಜತ್ತನ್ನ ಗೌಡ, ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ನಿವೃತ್ತ ಶಿಕ್ಷಕ ಕೆ.ಗೋಪಾಲಕೃಷ್ಣ ಗೊಲ್ಲ, ಬೆಳಾಲು ಗುತ್ತು ಜೀವಂಧರ್ ಜೈನ್, ಪುರೋಹಿತ ದುರ್ಗಾಪ್ರಸಾದ್ ಬೆಳಾಲು, ಗ್ರಾಮಾಭಿವೃದ್ದಿ ಯೋಜನೆ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಜನಾರ್ದನ ಪೂಜಾರಿ, ಸೇವಾ ಪ್ರತಿನಿಧಿ ಕು| ಆಶಾ, ಸತೀಶ್ ಎಳ್ಳುಗದ್ದೆ, ಇನ್ನಿತರ ಊರಿನ ಗಣ್ಯರು ಭಜನಾ ಮಂಡಳಿ ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ಅನಂತೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸುಂದರ ಎಂ.ಕೆ ಸ್ವಾಗತಿಸಿ, ಕಾರ್ಯದರ್ಶಿ ಸದಾಶಿವ ಒಡಿಪ್ರೊಟ್ಟು ವಂದಿಸಿದರು. ಶಿವಪ್ರಸಾದ್ ಕೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.