ಪರಿಸರ ನಾಶವಾದರೆ ಮನುಕುಲವೇ ನಾಶವಾದಂತೆ: ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ

Advt_NewsUnder_1
Advt_NewsUnder_1
Advt_NewsUnder_1

kapinadka koti vriksha 1 copyಕಾಪಿನಡ್ಕದಲ್ಲಿ ಕೋಟಿವೃಕ್ಷ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮ

ಅರಣ್ಯ ಎಂದರೆ ಗಾಳಿ, ನೀರನ್ನು ಉತ್ಪಾದಿಸುವ ಕಾರ್ಖಾನೆ ಈಗಾಗಲೇ ನಾವು ಅಭಿವೃದ್ದಿ ಅಂತಾ ಅರಣ್ಯ ನಾಶ ಮಾಡುತ್ತಿದ್ದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಮಾನವ ನೆಮ್ಮದಿಯ ಜೀವನಕ್ಕೆ ಭೂ ಭಾಗದ ಶೇ.೩೩ರಷ್ಟು ಅರಣ್ಯ ಪ್ರದೇಶ ಇರಲೇಬೇಕು. ಈ ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕಾದರೆ ಅರಣ್ಯ ಸರಕಾರಿ ಸ್ಥಳಗಳು, ಶಾಲಾ ಕಾಲೇಜು , ಸಂಘ ಸಂಸ್ಥೆಗಳಲ್ಲಿ ಸಸಿ ನೆಡುವುದರಿಂದ ವನ ಸೃಷ್ಟಿಸಬಹುದು. ಅಂತಹ ಕೆಲಸ ಇಂದು ಕಾಪಿನಡ್ಕ ಶಾಲೆಯಲ್ಲಿ ಆಗಿದೆ. ಇಲ್ಲಿ ಸುಮಾರು ೩೫೦ ಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದೇವೆ. ಇದರಲ್ಲಿ ಹಲಸು, ಹೆಬ್ಬಲಸು, ಸಂಪಿಗೆ. ಮಹಾಗನ, ಮಾವು. ಬಾದಾಮಿ, ರಾಂಪತ್ರೆ, ಮಂಚಪುಳಿ, ಪುನರ್ಪುಳಿ, ದೂಪ, ಹೊಳೆದಾಸವಾಳ ಎಂಬ ವಿವಿಧ ಜಾತಿಯ ಗಿಡವನ್ನು ಕೋಟಿವೃಕ್ಷ ಅಬಿಯಾನದಡಿ ನೆಟ್ಟಿದ್ದೇವೆ.
-ರಾಜೇಶ್, ಉಪ ಅರಣ್ಯಾಧಿಕಾರಿ ಅಳದಂಗಡಿ ವಲಯ

ಕಾಪಿನಡ್ಕ : ಪರಿಸರವನ್ನು  ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಮನುಷ್ಯ ನೆಮ್ಮದಿಯಾಗಿ ಬದುಕಬೇಕಾದರೆ ಗಾಳಿ, ನೀರು ಅವಶ್ಯಕ ಅಭಿವೃದ್ಧಿ  ನೆಪದಲ್ಲಿ ಅರಣ್ಯವನ್ನು ನಾಶಮಾಡುತ್ತಾ ಬಂದರೆ ಬಿಸಿಲ ತಾಪಮಾನ ಏರಿ ನೀರಿನ ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆಯೊಂದಿಗೆ ಹಲವಾರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಗಿಡನೆಟ್ಟು ಬರವನ್ನು ಅಳಿಸಿ  ನಿಸರ್ಗವನ್ನು    ಕಾಪಾಡೋಣ. ಇಲ್ಲದಿದ್ದರೆ ಮುಂದೊಂದು ದಿನ ಮನುಕುಲಕ್ಕೆ  ದೊಡ್ಡ ದುರಂತ ಖಂಡಿತ ಎಂದು ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಅಭಿಪ್ರಾಯಪಟ್ಟರು.
ಅವರು ಜು.೫ರಂದು ಕುಂದಾಪುರ ವಿಭಾಗ, ಮೂಡಬಿದ್ರೆ ಉಪವಿಭಾಗ ವೇಣೂರು ವಲಯ ಹಾಗೂ ಸ.ಕಿ.ಪ್ರಾ. ಶಾಲೆ ಕಾಪಿನಡ್ಕ ಇವರ ಸಂಯುಕ್ತಾಶ್ರ ಯದಲ್ಲಿ ಕೋಟಿವೃಕ್ಷ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿ ಕ್ಷೇತ್ರದ ಜಿ.ಪಂ ಸದಸ್ಯರಾದ ಶೇಖರ್ ಕುಕ್ಕೇಡಿ  ನೆರವೇರಿಸಿ ಮಾತನಾಡಿ  ಪರಿಸರ  ನಾಶವಾದರೆ ಮುಂದಿನ ನಮ್ಮ ಜೀವನಕ್ಕೆ ಅನಾಹುತವಿದ್ದು ಪರಿಸರವನ್ನು ಉಳಿಸುವ ಜಾಗೃತಿಯನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಜೊತೆಗೆ ಅರಣ್ಯದಲ್ಲಿ ಗಿಡ ನೆಡುವ ಬದಲು ಹಣ್ಣುಹಂಪಲು ನೀಡುವ ಗಿಡವನ್ನು ನೆಡುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ ನೆಲೆಯಲ್ಲಿ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಮಾತನಾಡಿ ಇಂದು ಶಾಲೆಯಲ್ಲಿ ಸುಮಾರು ಜಾತಿಯ ಗಿಡವನ್ನು ನೆಟ್ಟು ವನವನ್ನು ಸೃಷ್ಟಿಸಿದ್ದಾರೆ. ಇದನ್ನು ಉಳಿಸಿ ರಕ್ಷಣೆ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಂಜ ಗ್ರಾ.ಪಂ ಅಧ್ಯಕ್ಷೆ ದೇವಕಿ ಕೊರಗಪ್ಪ ನಾಯ್ಕರವರು ವಹಿಸಿ ಮಾತನಾಡಿ ಪರಿಸರದಲ್ಲಿ ನಮ್ಮ ಸಾಕು ಪ್ರಾಣಿಗಳನ್ನು ಬಿಡದೇ ನೆಟ್ಟ್ಟ ಗಿಡವನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಬೇಕು  ಎಂದರು. ವೇದಿಕೆಯಲ್ಲಿ ತಾ.ಪಂ ಸದಸ್ಯೆ ವಿನೂಷ ಪ್ರಕಾಶ್ ಪೂಜಾರಿ, ಗ್ರಾ.ಪಂ ಸದಸ್ಯರಾದ ಹೇಮಂತ್, ಜಯಶ್ರೀ, ಶ್ರೀ.ಧ.ಗ್ರಾ. ಯೋ ಶಿವರಾಮ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುಧಾಕರ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಸಸಿಯನ್ನು ವಿತರಿಸಲಾಯಿತು. ಶಾಲಾ ಮಕ್ಕಳು ನಾಡಗೀತೆ ಹಾಡಿದರು. ಅಳದಂಗಡಿ ವಲಯ ಉಪ ಅರಣ್ಯಾಧಿಕಾರಿ ರಾಜೇಶ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಮನಾ ಜಿ ಧನ್ಯವಾದವಿತ್ತರು.
ಅರಣ್ಯ ರಕ್ಷಕ ಶಶಿಕಾಂತ್, ಅರಣ್ಯ ವೀಕ್ಷಕ ವೆಂಕಪ್ಪ, ಅಶ್ಲೇಷ್ ಅಳದಂಗಡಿ, ಸಂತೋಷ್ ಕುಮಾರ್ ಕಾಪಿನಡ್ಕ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.