ಬೆಳ್ತಂಗಡಿ : ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

eco fress enterprices copyಬೆಳ್ತಂಗಡಿ : ಇಕೋಪ್ರೆಶ್ ಎಂಟರ್‌ಪ್ರೈಸಸ್ ಬೆಳ್ತಂಗಡಿಯವರು ತನ್ನ ಕೃಷಿಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ವಿಷ್ಣುಮೂರ್ತಿ ದೇವಸ್ಥಾನ ಮೂಡಬಿದ್ರೆಯಲ್ಲಿ ಜು.2 ರಂದು ಪ್ರದರ್ಶಿಸಿದರು. ಪ್ರಾತ್ಯಕ್ಷತೆಯ ಉದ್ಘಾಟನೆಯನ್ನು ಮೂಡಬಿದ್ರೆ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಪಿಜತ್ತಾಯ ದೀಪ ಬೆಳಗಿಸುವುದರ ಮೂಳಕ ನೆರವೇರಿಸಿ ಮಾತನಾಡಿ ಇಂತಹ ಕೃಷಿಯಂತ್ರೋಪಕರಗಳ ಪ್ರಾತ್ಯಕ್ಷತೆಯಿಂದ ಕೃಷಿಕರಿಗೆ ಅನುಭವದ  ಜೊತೆಗೆ ತುಂಬಾ ಪ್ರಯೋಜನವಿದೆ ಎಂದರು. ವೇದಿಕೆಯಲ್ಲಿ ರಾಜವರ್ಮ ಬೈಲಂಗಡಿ, ರಘುರಾಮ ಶೆಟ್ಟಿ, ತಾರನಾಥ ಶೆಟ್ಟಿ ಉಪಸ್ಥಿತರಿದ್ದರು. ಮರ ಹತ್ತುವ ಮೇಷಿನ್, ಟ್ರಾಲಿ ಹಾಗೂ 72 ಅಡಿಗಳಷ್ಟು ಎತ್ತರ ಮದ್ದು ಸಿಂಪಡಿಸುವ ಗನ್‌ನ ಬಗ್ಗೆ ಇಕೋಪ್ರೆಶ್‌ನ ಮಾಲಕ ರಾಕೇಶ್ ಹೆಗ್ಡೆಯವರು ವಿವರಿಸಿದರು. ಧನುಶ್ ಹೆಗ್ಡೆ ಸಹಕರಿಸಿದರು. ಈ ಕೃಷಿಯಂತ್ರೋಪಕರಣಗಳ ಬಗ್ಗೆ ಆಸಕ್ತಿಯಿದ್ದು ಇದರ ಬಗ್ಗೆ ಮಾಹಿತಿ ಬೇಕಾದಲ್ಲಿ ರಾಕೇಶ್ ಹೆಗ್ಡೆ9964553455 ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.