ವಿವಿಧ ರಾಜ್ಯ ಹೆದ್ದಾರಿ ದುರಸ್ಥಿಗೆ ರೂ.೨೮ ಕೋಟಿ ಮಂಜೂರು : ಬಂಗೇರ

Advt_NewsUnder_1
Advt_NewsUnder_1
Advt_NewsUnder_1

Ujire heddari shilanyasa copyಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವಿವಿಧ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಸರಕಾರ ರೂ.28 ಕೋಟಿ ಅನುದಾನ ಮಂಜೂರುಗೊಳಿಸಿದ್ದು, ಈ ಕಾಮ ಗಾರಿಗಳಿಗೆ ಜು.1ರಂದು ಉಜಿರೆಯಲ್ಲಿ ಶಾಸಕ ಕೆ. ವಸಂತ ಬಂಗೇರ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ಸರಕಾರ ಮಂಜೂರುಗೊಳಿಸಿದ ಅನುದಾನದಲ್ಲಿ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಹಾಗೂ ದುರಸ್ಥಿ ಕಾಮಗಾರಿ ನಡೆಯಲಿದೆ. ಮೂಲಭೂತ ಸೌಕರ್ಯ ಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ತಾಲೂಕಿನ ಬಹುತೇಕ ಎಲ್ಲಾ ರಸ್ತೆಗಳು ಸುಸ್ಥಿತಿ ಯಲ್ಲಿದ್ದು, ಹದಗೆಟ್ಟಿರುವ ರಸ್ತೆಗಳನ್ನು ಈ ಅವಧಿಯಲ್ಲಿ ದುರಸ್ಥಿಗೊಳಿಸ ಲಾಗಿದೆ. ಈಗ ಮಂಜೂರುಗೊಂಡ ರೂ.28 ಕೋಟಿ ಅನುದಾನದಲ್ಲಿ ಸುಬ್ರಹ್ಮಣ್ಯ ಉಡುಪಿ ರಾಜ್ಯ ಹೆದ್ದಾರಿ ಯ ಆಯ್ದ6 ಕಿ.ಮೀ, ಗುರುವಾಯ ನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ 17 ಕಿ.ಮೀ, ವಿಸ್ತರಣೆ, ಬೆಳ್ತಂಗಡಿ-ಮೂಲ್ಕಿ ವಯಾ ವೇಣೂರು ರಸ್ತೆಯ 6.4ಕಿ.ಮೀ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯನ್ನು ಈಗಾಗಲೇ 5.5 ಮೀಗೆ ವಿಸ್ತರಣೆ ಮಾಡಲಾಗಿದ್ದು, ಈ ಬಾರಿ 7 ಮೀಗೆ ವಿಸ್ತರಗೊಳ್ಳಲಿದೆ. ಬೆಳ್ತಂಗಡಿ-ಮೂಡಬಿದ್ರೆ ರಸ್ತೆ ಗುರುವಾಯನ ಕೆರೆಯಿಂದ ಪೊಟ್ಟುಕೆರೆವರೆಗೆ, ಗಾಂಧಿನಗರದಿಂದ ಹೊಸಂಗಡಿವರೆಗೆ ೭ಮೀ ವಿಸ್ತರಣೆಗೊಳ್ಳಲಿದೆ. ಉಜಿರೆಯಲ್ಲಿ ಕಾಲೇಜಿನ ಎದುರು ರಸ್ತೆ ಅಗಲಗೊಳ್ಳಲಿದೆ ಎಂದು ಲೋಕೋಪ ಯೋಗಿ ಇಲಾಖೆಯ ಸಹಾಯಕ ಕಾರ್ಯಾನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ  ನಮೀತಾ, ಮಮತಾ ಎಂ. ಶೆಟ್ಟಿ, ಶೇಖರ ಕುಕ್ಕೇಡಿ, ಕೊರಗಪ್ಪ ನಾಯ್ಕ, ತಾ.ಪಂ. ಅಧ್ಯಕ್ಷೆ ದಿವ್ಯಾಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸದಸ್ಯ ಶಶಿಧರ್ ಕಲ್ಮಂಜ, ಉಜಿರೆ ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀಧರ ಪೂಜಾರಿ, ಸದಸ್ಯರಾದ ರವಿ ಬರೆಮೇಲು, ರಾಧಾಕೃಷ್ಣ ಶೆಟ್ಟಿ, ಬಾಲಕೃಷ್ಣ ಗೌಡ, ಉಜಿರೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ ಅಜಿಲ, ಸಹಾಯಕ ಇಂಜಿನಿಯರ್ ತೌಸಿಫ್ ಅಹಮ್ಮದ್, ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಗುತ್ತಿಗೆದಾರ ಜೆ.ಡಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.