ತಾಲೂಕಿನೆಲ್ಲೆಡೆ `ಈದುಲ್‌ಫಿತರ್’ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ujireಬೆಳ್ತಂಗಡಿ ಖಳರ್ ಜುಮ್ಮಾ ಮಸೀದಿಯಲ್ಲಿ ಖತೀಬರಾದ ಶಂಶುದ್ದೀನ್ ದಾರಿಮಿ ನೇತೃತ್ವದಲ್ಲಿ ನಡೆದ ಈದ್ ನಮಾಝ್

ಸರಕಾರಿ ಕಚೇರಿಗಳಿಗೆ ಇಂದು ರಜೆ
ಬೆಳ್ತಂಗಡಿ : ರಾಜ್ಯ ಸರಕಾರದ ಆದೇಶ ಪ್ರಕಾರ ಈದುಲ್‌ಫಿತರ್ ಸಾರ್ವತ್ರಿಕ ರಜೆಯನ್ನು ಸರಕಾರಿ ಕಚೇರಿಗಳಿಗೆ ಜು.7 ಇಂದು ನೀಡಲಾಗಿದೆ.
ಜು.6ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು. ಆದರೆ ಶಾಲಾ ಕಾಲೇಜುಗಳಿಗೆ ಈ ಹಿಂದೆ ನಿರ್ಧಾರವಾದಂತೆ ರಜೆ ಘೋಷಿಸಲಾಗಿತ್ತು. ದ.ಕ ಜಿಲ್ಲೆಯಲ್ಲಿ ಬುಧವಾರ ಈದ್ ನಡೆದುದರಿಂದ ಜಿಲ್ಲೆಯ ಮುಸ್ಲಿಂ ಸರಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಹಬ್ಬದ ರಜೆ ಪಡೆಯಲು ವಿಶೇಷ ಅನುಮತಿ ನೀಡಲಾಗಿತ್ತು.

ಬೆಳ್ತಂಗಡಿ : ಜು.5ರಂದು ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಒಂದು ತಿಂಗಳು ಉಪವಾಸ ವೃತಾಚರಣೆ ಮಾಡಿದ್ದ ಮುಸಲ್ಮಾನ ಬಾಂಧವರು ಉಪವಾಸವನ್ನು ಅಂತ್ಯಗೊಳಿಸಿ, ಸ್ನೇಹ, ಶಾಂತಿ, ಸಂತೋಷ ಹಾಗೂ ಉದಾತ್ತೆಯ ಪ್ರತೀಕವಾದ ರಂಜಾನ್ ಹಬ್ಬವನ್ನು ಜು.೬ರಂದು ಬೆಳ್ತಂಗಡಿ ತಾಲೂಕಿನಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಿದರು.
ಸ್ವೇಚ್ಚೆ. ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧದ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸಲು ಒಂದು ತಿಂಗಳ ಕಠಿಣಪೂರ್ಣ ವೃತಾಚರಣೆಯ ಬಳಿಕ ಈದ್-ಉಲ್-ಫಿತರ್ ಹಬ್ಬ ಆಚರಿಸಲಾಗುತ್ತಿದೆ. ಬೆಳ್ತಂಗಡಿ ತಾಲೂಕಿನ ಮೊತ್ತ ಮೊದಲ ಮಸೀದಿ ಗುರುವಾಯನಕೆರೆ, ಎರಡನೇ ಮಸೀದಿ ಕಿಲ್ಲೂರು, ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾಶರೀಫ್ ಮತ್ತು ರೆಹ್ಮಾನಿಯ ಜುಮ್ಮಾ ಮಸೀದಿ, ಬೆಳ್ತಂಗಡಿ, ಉಜಿರೆ, ಕಕ್ಕಿಂಜೆ, ಗುರುವಾಯನಕೆರೆ, ಮನ್‌ಶೆರ್ ಗೇರುಕಟ್ಟೆ, ಪದ್ಮುಂಜ, ಬಂದಾರು, ಮಡಂತ್ಯಾರು, ಪುಂಜಾಲಕಟ್ಟೆ, ವೇಣೂರು, ಪಡ್ಡಂದಡ್ಕ, ಚಾರ್ಮಾಡಿ, ಕೊಯ್ಯೂರು, ಬೆಳಾಲು, ಕೊಕ್ಕಡ ಸೇರಿದಂತೆ ತಾಲೂಕಿನಾದ್ಯಂತ ಮಸೀದಿಗಳಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಹಬ್ಬದ ಸಂದೇಶದಂತೆ ಹೊಸ ಬಟ್ಟೆಗಳನ್ನು ಧರಿಸಿ ತಮ್ಮ ವ್ಯಾಪ್ತಿಯ ಮಸೀದಿಗೆ ತೆರಳಿದ ಮುಸ್ಲಿಂ ಬಾಂಧವರು  ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಬಳಿಕ ಪ್ರತಿಯೊಬ್ಬರು ತಮ್ಮ ಕುಟುಂಬದವರ ಮನೆ ಮನೆಗೆ ತೆರಳಿ ಔತನ ಕೂಟದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.