ಅರಸಿನಮಕ್ಕಿಯಲ್ಲಿ ಇಂದು ನಮೋ ಸೇವಾಕೇಂದ್ರ ಉದ್ಘಾಟನೆ ನಡೆಯಿತು. ಇದೇ ಸಂದರ್ಭ ಕರ್ನಾಟಕ ಕ್ಯಾಶ್ಯೂ ಮ್ಯಾನಿಫ್ಯಾಕ್ಚರಿಂಗ್ ಎಸೋಸಿಯೇಶನ್ನ ಪ್ರಾಯೋಜಕತ್ವದಲ್ಲಿ ಉಚಿತ ಗೇರುಸಸಿ ವಿತರಣಾ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯನ್ನು ಮಂಗಳೂರು ರಾ.ಸ್ವ.ಸೇ.ಸಂಘ ವಿಭಾಗ ಕಾರ್ಯವಾಹ ಸೀತಾರಾಮ ನೆರವೇರಿಸಿದರು.
ಬೆಳ್ತಂಗಡಿ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬೆಂಗಳೂರು ಹೈಕೋರ್ಟ್ ನ್ಯಾಯಾವಾದಿ ಹರೀಶ್ ಪೂಂಜಾ, ಮಂಗಳೂರು ಉದ್ಯಮಿ ಎ.ಸಿ ಕುರಿಯನ್, ಬೆಳ್ತಂಗಡಿ ಭಾ.ಜ.ಪಾ ಅಧ್ಯಕ್ಷರು ರಂಜನ್.ಜಿ.ಗೌಡ, ಬೆಳ್ತಂಗಡಿ ನ್ಯಾಯಾವಾದಿ ಜೆ.ಕೆ ಪೌಲ್, ಧರ್ಮಸ್ಥಳ ಕ್ಷೇತ್ರ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಬೆಳ್ತಂಗಡಿ ತಾ.ಪಂ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ, ಶಿಬಾಜೆ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಶೀಲ ಮುಖ್ಯ ಅತಿಥಿಗಳಾಗಿದ್ದರು.