ರೈತ ಬೆಳೆ ಬೆಳೆಯದಿದ್ದರೆ ದೇಶಕ್ಕೆ ಅನ್ನವಿಲ್ಲ : ಶಾಸಕ ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

krshi abhiyana (1)ಬೆಳ್ತಂಗಡಿ : ರೈತ ಭತ್ತ ಮತ್ತು ಇತರ ಯಾವುದೇ ಬೆಳೆ ಬೆಳೆಯದಿದ್ದರೆ ಇಡೀ ದೇಶಕ್ಕೆ ಅನ್ನವಿಲ್ಲದಂತಹ ಸ್ಥಿತಿ ಬರಬಹುದು. ಆದ್ದರಿಂದ ರೈತರನ್ನು ನಾವು ದೇವರಂತೆ ಕಂಡು ಪೂಜಿಸಬೇಕು. ಸರಕಾರ ಅವರ ಕಡೆಗೆ ಹೆಚ್ಚಿನ ನೋಟ ಬೀರಬೇಕು ಎಂದು ಶಾಸಕ ವಸಂತ ಬಂಗೇರ ಹೇಳಿದರು.
ದ.ಕ. ಜಿ.ಪಂ. ಮತ್ತು ಕೃಷಿ ಇಲಾಖೆ ಬೆಳ್ತಂಗಡಿ ಇದರ ವತಿಯಿಂದ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಜೂ. 27 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕೃಷಿ ಇಲಾಖೆಯಲ್ಲಿ ತೀವ್ರವಾದ ಸಿಬ್ಬಂದಿ ಕೊರತೆ ಇದ್ದರೂ ಕೂಡ ಸರಕಾರ ಸ್ಪಂದಿಸುತ್ತಿಲ್ಲವೆನ್ನುವುದು ಖೇದಕರ. ನನ್ನದೇ ಪಕ್ಷದ ಸರಕಾರವಾದರೂ ಸರಿ ನಾಚಿಕೆಪಟ್ಟುಕೊಳ್ಳಬೇಕು. ಸಿಬ್ಬಂದಿಯೇ ಇಲ್ಲದಿದ್ದರೆ ರೈತರಿಗೆ ಹೇಗೆ ನ್ಯಾಯ ಕೊಡಬಹುದು. ಈ ಸರಕಾರಗಳು ಜನಪರವಾದ ನ್ಯಾಯಯುತ ಕಾರ್ಯಮಾಡಿದರೆ ಅದನ್ನು ಒಪ್ಪಿಕೊಳ್ಳೋಣ ಆದರೆ ಅವರು ಮಾಡಿದ್ದೆಲ್ಲವನ್ನೂ ಒಪ್ಪಿಕೊಳ್ಳಬೇಕು ಎಂಬ ಭಾವನೆ ಇರುವುದು ಸರಿಯಲ್ಲ. ರೈತರ ಕಡೆಗೆ ಸರಕಾರ ನೋಡಿದ್ದು ಏನೇನೂ ಸಾಲದು. ರಾಷ್ಟ್ರ ಪ್ರಶಸ್ತಿ ಪಡೆದ ಪ್ರಭಾಕರ ಮಯ್ಯರಿಗೆ ಕೇವಲ 50 ಸಾವಿರ ನಗದು ನೀಡಿ ಪುರಸ್ಕರಿಸಿರುವುದು ಸರಿಯಲ್ಲ. ಅದನ್ನು ಇನ್ನೂ ಹೆಚ್ಚಿಸಿ ಸರಕಾರ ತನ್ನ ಮಾನ ಕಾಪಾಡಿಕೊಳ್ಳಬೇಕು ಎಂದರು.
ರೈತರಿಗೆ ಸಬ್ಸಿಡಿ ಎಂಬ
ಸರಕಾರದ ದೊಡ್ಡ ಮೋಸ:
ರೈತರಿಗೆ ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ಎಂಬುದಾಗಿ ಸರಕಾರ ಮಾಡಿದ್ದು ಇದರ ಪ್ರಯೋಜನ ಯಂತ್ರೋಪಕರಣ ಕಂಪೆನಿಯ ಪಾಲಾಗುತ್ತಿದೆ. ಸಬ್ಸಿಡಿ ಇರುವ ಮೊತ್ತದಷ್ಟು ಕಂಪೆನಿ ಯಂತ್ರಗಳಿಗೆ ಬೆಲೆ ಹೆಚ್ಚಿಸಿ ಆ ಮೂಲಕ ಸರಕಾರ ರೈತರಿಗೆ ದೊಡ್ಡ ಮೋಸ ಮಾಡುತ್ತಿದೆ ಎಂದು ಬಂಗೇರ ಆರೋಪಿಸಿದರು.
ರೈತರಿಗೆ ಇಲಾಖೆಯಿಂದ ಸಿಗುವ ಸವಲತ್ತು ಮತ್ತು ಕೃಷಿಯಲ್ಲಿ ಆಧುನಿಕ ಪದ್ದತಿ ಅಳವಡಿಕೆ ಬಗ್ಗೆ ಮಾಹಿತಿ ದೊರೆಯಬೇಕು. ಇರುವ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಮುಂದಕ್ಕಾದರೂ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಒಳ್ಳೆಯ ಬುದ್ದಿ ಬರಲಿ ಎಂದು ಕಟು ಶಬ್ಧಗಳಿಂದ ಮಾತನಾಡಿದರು ಬೆಳ್ತಂಗಡಿ  ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿ, ನಗರ ಪಂಚಾಯತ್ ವ್ಯಾಪ್ತಿಗೂ ಕೃಷಿ ಇಲಾಖೆ ಸೌಲಭ್ಯಗಳು ದೊರೆಯುವಂತಾಗಲಿ ಎಂದು ಆಶಿಸಿದರು. ಕುವೆಟ್ಟು ಕ್ಷೇತ್ರದ ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ ಮಾತನಾಡಿ, ಭತ್ತದ ಬೆಳೆ ಬೆಳೆಯುವ ಎಲ್ಲಾ ರೈತರಿಗೂ ಸರಕಾರದ ಪ್ರೋತ್ಸಾಹ ದೊರೆತರೆ ಮಾತ್ರ ಪ್ರೇರಣೆಯಾಗಬಹುದು ಎಂದರು.
ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಡಾ| ಹೆಚ್. ಕೆಂಪೇಗೌಡ ಮಾತನಾಡಿ, ಕೃಷಿಕರು ಮಾಹಿತಿಗಳನ್ನು ಪಡೆದುಕೊಂಡಲ್ಲಿ ಅಭಿವೃದ್ಧಿ ಸಾಧಿಸಬಹುದು. ಕೃಷಿಯಲ್ಲಿ ಅತಿ ಹೆಚ್ಚು ಇಳುವರಿ ಪಡೆದು 10 ಸಾವಿರ ಗಳಿಸುವ ತೃಪ್ತಿಯಂತೆ, ಸರಳ ವಿಧಾನದ ಮೂಲಕ ಮಾಹಿತಿ ಪಡೆದು 20 ಸಾವಿರ ಲಾಭ ಮಾಡುವುದೇ ಚಾಣಾಕ್ಷತನ ಎಂದರು.
ವೇದಿಕೆಯಲ್ಲಿ ಲಾಲ ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಬೆಳ್ತಂಗಡಿ ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ ಜೈನ್, ಬೆಳ್ತಂಗಡಿ ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ನರೇಂದ್ರ, ಕೃಷಿ ಇಲಾಖೆ
ಸಹಾಯಕ ನಿರ್ದೇಶಕ ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ. ಯೋಜನಾಧಿಕಾರಿ ರೂಪಾ ಜಿ. ಜೈನ್ ಉಪಸ್ಥಿತರಿದ್ದರು.
ಕೃಷಿ ಇಲಾಖೆಯ ಮಾಹಿತಿ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು. ರಾಷ್ಟ್ರಪ್ರಶಸ್ತಿ ಪಡೆದ ಕೃಷಿಕ ಪ್ರಭಾಕರ ಮಯ್ಯ ಅವರನ್ನು ಸನ್ಮಾನಿಸಲಾಯಿತು. ಕೃಷಿ ಅಧಿಕಾರಿ ನಾರಾಯಣ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ನಿರ್ದೇಶಕ ತಿಲಕ್‌ಪ್ರಸಾದ್‌ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರಂಭದಲ್ಲಿ ರೈತಗೀತೆ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು. ಚಿದಾನಂದ ಹೂಗಾರ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.