ಕ್ರೈಸ್ಟ್ ಅಕಾಡಮಿಯಲ್ಲಿ ಪೂರ್ವಪ್ರಾಥಮಿಕ ಶೈಕ್ಷಣಿಕ ಸಮ್ಮಿಲನ 2016

cristha acedemiಮುಂಡಾಜೆ: ಇಲ್ಲಿನ ಕ್ರೈಸ್ಟ್ ಅಕಾಡಮಿ ಅವರರಣದಲ್ಲಿ ಜೂ. 25 ರಂದು ತಾಲೂಕಿನ ಪೂರ್ವಪ್ರಾಥಮಿಕ ಶಾಲೆಗಳ ವಾರ್ಷಿಕ ಶೈಕ್ಷಣಿಕ ಸಮ್ಮಿಲನ 2016 ನಡೆಯಿತು.
ಪ್ರಧಾನ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಪಿ ಕುಚಿನಾಡ ಅವರು ಮಾತನಾಡಿ, ಎಳೆಯ ಪ್ರಾಯದ ಮಕ್ಕಳು ತಂದೆ ತಾಯಿ ಜೊತೆಗೆ ಅದೇ ಪ್ರಪಂಚದಲ್ಲಿ ವಿಹರಿಸುವವರು. ಅವರನ್ನು ಕರೆತಂದು ಶೈಕ್ಷಣಿಕ ವಾತಾವರಣಕ್ಕೆ ಪರಿವರ್ತಿಸಬೇಕಾದರೆ ಜವಾಬ್ಧಾರಿ ಈ ಶಾಲೆಗಳ ಮೇಲಿವೆ. ತಂದೆ ತಾಯಿಯ ಪ್ರೀತಿಯನ್ನು ಮಕ್ಕಳಿಗೆ ಇಲ್ಲೂ ದೊರೆಯುವಂತೆ ಮಾಡುವುದರ ಜೊತೆಗೆ ಪೂರ್ವಪ್ರಾಥಮಿಕ ಶಿಕ್ಷಣದ ಕಂಪು ಸಗುವಂತೆ ಮಾಡುವಲ್ಲಿ ಜವಾಬ್ಧಾರಿಯನ್ನು ಸರಿಯಾಗಿ ನಿಬಾಯಿಸಬೇಕು ಎಂದು ಸಲಹೆ ನೀಡಿದರು. ಕಿರಿಯ ಅಂಗನವಾಡಿ ಸಂಯೋಜಕಿ ಕಾವೇರಿ, ಕೈಸ್ತ ಅಕಾಡಮಿಯ ಸಲಹೆಗಾರ ಪಿ. ಸಿ ಸೆಬಾಸ್ಟಿಯನ್ , ಸೈಮಟ್ ತೋಮಸ್ ಎಜಕೇಶನಲ್ ಸೊಸೈಟಿ ಮೈಸೂರು ಇದರ ಕಾರ್ಯದರ್ಶಿ ಫಾ| ಸೂರಜ್ ಅಬ್ರಾಹಾಂ ಅತಿಥಿಗಳಾಗಿದ್ದರು. ಕ್ರಿಸ್ತ ಅಕಾಡಮಿ ನಿರ್ದೇಶಕ ಫಾ| ಜೋನ್ ಪ್ರಾರ್ಥನೆ ಹಾಡಿದರು.
ಕಾರ್ಯಾಗಾರದಲ್ಲಿ ತಾಲೂಕಿನ 29 ಶಾಲಾ ಪೂರ್ವ ಶಿಕ್ಷಣ ಕೇಂದ್ರಗಳ ಶಿಕ್ಷಕ- ಶಿಕ್ಷಕಿಯರು ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯ ಲಲಿತಾ ನಿರೂಪಿಸಿದರು. ಕ್ರೈಸ್ತ ಅಕಾಡಮಿಯ ಮುಖ್ಯೋಪಾಧ್ಯಾಯಿನಿ ಜೆಸ್ಸಿ ಧನ್ಯವಾದವಿತ್ತರು. ಕ್ರೈಸ್ಟ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.