ಬೆಳ್ತಂಗಡಿಯ ಅನುರಾಗ್ ಕಾಂಪ್ಲೆಕ್ಸ್ ಮಾಲಿಕ ಉಮಾನಾಥ ಪೈ ನಿಧನ

Advt_NewsUnder_1
Advt_NewsUnder_1
Advt_NewsUnder_1

pai.jpegಬೆಳ್ತಂಗಡಿ: ಇಲ್ಲಿನ ಮೂರು ಮಾರ್ಗದ ಬಳಿಯ ನಿವಾಸಿ ಅನುರಾಗ್ ಕಾಂಪ್ಲೆಕ್ಸ್ ಮಾಲಿಕ ಉಮಾನಾಥ ಪೈ (59ವ.) ಅವರು ಜೂ. 27ರಂದು ನಿಧನರಾಗಿದ್ದಾರೆ. ಪ್ರಾರಂಭದಲ್ಲಿ ಪಿತ್ತ ಕಾಮಾಲೆ ರೋಗದಿಂದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲ ಸೂಕ್ತ ಚಿಕಿತ್ಸೆ ನೀಡಲಾಗಿತ್ತಾದರೂ ಅದರೊಂದಿಗೆ ಹೃದಯ ಸಂಬಂಧಿ ಇತರ ಕಾಯಿಲೆಗಳೂ ಉಲ್ಬಣಿಸಿದ್ದರಿಂದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನಹೊಂದಿದರು. ಮೃತರ ಇಬ್ಬರು ಮಕ್ಕಳು ವಿದೇಶದಲ್ಲಿದ್ದವರು ಊರಿಗೆ ಮರಳಿದ್ದಾರೆ. ಮೃತರು ಪತ್ನಿ ಜಯಂತಿ ಉಮಾನಾಥ ಫೈ, ಪುತ್ರ ಅನುರಾಗ್ ಪೈ ಮತ್ತು ಪುತ್ರಿ ಅನೂಷಾ ಪೈ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯನ್ನು ಜೂ. 28ರಂದು ನೆರವೇರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.