ಚಾರ್ಮಾಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಕಾರ್ಯಕ್ರಮ ಜೂ. 24 ರಂದು ಗ್ರಾ.ಪಂ ಸಭಾಭವನದಲ್ಲಿ ಜರುಗಿತು.
ಗ್ರಾ.ಪಂ ಅಧ್ಯಕ್ಷೆ ಶೈಲಜಾ, ರೋಟರಿ ಸಮುದಾಯ ದಳ ಚಾರ್ಮಾಡಿ ಅಧ್ಯಕ್ಷರೂ ಆಗಿರುವ ತಾ.ಪಂ ಸದಸ್ಯ ಕೊರಗಪ್ಪ ಗೌಡ, ಕಾರ್ಯದರ್ಶಿ ಎಂ ಗೋಪಾಲಕೃಷ್ಣ, ರೋಟರಿ ಕ್ಲಬ್ ಅಧ್ಯಕ್ಷ ನಿವೃತ ಮೇಜರ್ ಜನರಲ್ ಎಂ. ವಿ ಭಟ್, ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಪ್ರಮುಖರಾದ ಡಿ.ಎಂ ಗೌಡ, ವೆಂಕಟೇಶ್ವರ ಭಟ್, ಬಾಬು ಪೂಜಾರಿ ಕೂಳೂರು, ಪ್ರಕಾಶ್ ನಾರಾಯಣ್ ರಾವ್ ಚಾರ್ಮಾಡಿ, ಮಧುಕರ ಕಕ್ಕಿಂಜೆ ಮೊದಲಾದವರು ಉಪಸ್ಥಿತರಿದ್ದರು.