ಮಲ್‌ಜಅ ಪ್ರಾರ್ಥನಾ ಸಮ್ಮೇಳನ ಯಶಸ್ವಿಗಾಗಿ ಮಸೀದಿಗಳ ಅಧ್ಯಕ್ಷ ಕಾರ್ಯದಶಿಗಳ ವಿಶೇಷ ಸಭೆ

2ಉಜಿರೆ: ಕಾಶಿಬೆಟ್ಟು ಮಲ್‌ಜಅ ಪ್ರಾರ್ಥನಾ ಸಮ್ಮೇಳನದ ಪೂರ್ವಭಾವಿಯಾಗಿ ತಾಲೂಕಿನ ಸುನ್ನೀ ಸಂಯುಕ್ತ ಜಮಾತ್ ವ್ಯಾಪ್ತಿಗೊಳಪಟ್ಟ 63 ಜಮಾತ್‌ಗಳು ಮತ್ತು ಇತರ ಮೊಹಲ್ಲಾಗಳ ಅಧ್ಯಕ್ಷ ಕಾರ್ಯದರ್ಶಿಗಳ ವಿಶೇಷ ಸಮಾಲೋಚನಾ ಸಭೆಯು ಜೂ. 23 ರಂದು ಮಲ್‌ಜಅ ಕ್ಯಾಂಪಸ್‌ನ “ಮರ್‌ಹೂಮ್ ಪೊಸೋಟ್ ತಂಙಳ್” ವೇದಿಕೆಯಲ್ಲಿ ನಡೆಯಿತು.
ಪ್ರಾರ್ಥನಾ ಸಮ್ಮೇಳನ ಸ್ವಾಗತ ಸಮಿತಿ ಚೇರ್‌ಮೆನ್ ಸಯ್ಯಿದ್ ಉಜಿರೆ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ವರ್ಕಿಂಗ್ ಚೇರ್‌ಮೆನ್ ಎಂ. ಕೆ ಬದ್ರುದ್ದೀನ್ ಪರಪ್ಪು, ಎಸ್‌ಎಮ್‌ಎ ಜಿಲ್ಲಾ ಸಂಘಟನೆಯ ಪದಾಧಿಕಾರಿ ಉಜಿರ್‌ಬೊಟ್ಟು ಅಬ್ದುಲ್ ಖಾದರ್ ಹಾಜಿ, ಸ್ವಾಗತ ಸಮಿತಿ ಜನರಲ್ ಕನ್ವೀನರ್ ಅಶ್ರಫ್ ಆಲಿಕುಂಞಿ, ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಈ ಸಭೆಯಲ್ಲಿ ತಮ್ಮ ಜಮಾತ್‌ಗಳಿಂದ ಜನರು ಪ್ರಾರ್ಥನಾ ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಚಾರ ಮಾಡುವರೇ ಅಧಿಕೃತ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.