ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ-ಸೊತ್ತು ನಾಶ: ರೂ.1.50 ಲಕ್ಷ ನಷ್ಟ

ತೋಟತ್ತಾಡಿ : ಆಕಸ್ಮಿಕವಾಗಿ ದನದ ಕೊಟ್ಟಿಗೆಗೆ ಬೆಂಕಿ ಹಿಡಿದು ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿ ಸುಮಾರು ರೂ.1.50ಲಕ್ಷ ನಷ್ಟ ಸಂಭವಿಸಿದ ಘಟನೆ ಜೂ.19ರಂದು ತೋಟತ್ತಾಡಿ ಡಿಮಜಲು ಎಂಬಲ್ಲಿ ನಡೆದಿದೆ.
ಇಲ್ಲಿಯ ಡಿಮಜಲು ರಾಮಣ್ಣ ಪೂಜಾರಿಯವರ ದನದ ಕೊಟ್ಟಿಗೆಗೆ ಅಂದು ಸಂಜೆ ಸುಮಾರು ೪.೩೦ಕ್ಕೆ ಆಕಸ್ಮಿಕವಾಗಿ ಬೆಂಕಿ ಹಿಡಿಯಿತು. ಈ ಸಮಯ ರಾಮಣ್ಣ ಪೂಜಾರಿ ಒಬ್ಬರೇ ಮನೆಯಲ್ಲಿದ್ದರು. ಕೂಡಲೇ ಕೊಟ್ಟಿಗೆಯಲ್ಲಿದ್ದ ಹಾಲು ಕರೆಯುವ ಒಂದು ದನ ಮತ್ತು ಕರು ಇದ್ದು, ಸೇರಿದ್ದ ಪರಿಸರದವರು ಹಗ್ಗ ತುಂಡರಿಸಿ ಹೊರಗೆ ಬಿಟ್ಟರು. ನಂತರ ಬೆಂಕಿಯನ್ನು ನಂದಿಸಲು ಸಹಕರಿಸಿದರು. ಹಟ್ಟಿ ಸಂಪೂರ್ಣ ಸುಟ್ಟು ಹೋಗಿದ್ದು, ಅದರಲ್ಲಿದ್ದ ಬೈಹುಲ್ಲು, ತೆಂಗಿನಕಾಯಿ, ಅಡಿಕೆ, ಬಟ್ಟೆಬರೆ, ಮಳೆಗಾಲಕ್ಕಾಗಿ ಸಂಗ್ರಹಿಸಿಟ್ಟ ತೆಂಗಿನ ಮಡಲು ಸುಟ್ಟು ಹೋಗಿದ್ದು ರೂ.೧.೫೦ ಲಕ್ಷ ನಷ್ಟ ಉಂಟಾಗಿದೆ ಎಂದು ರಾಮಣ್ಣ ಪೂಜಾರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.