ಮಡಂತ್ಯಾರು: ಜೂ.19ರಂದು ಜೆಸಿಐ ಕಾಪುವಿನ ಆತಿಥ್ಯದಲ್ಲಿ ನಡೆದ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಮಡಂತ್ಯಾರ್ ಘಟಕವು ಅತ್ಯುತ್ತಮ ಘಟಕ ಪ್ರಶಸ್ತಿಗೆ ಭಾಜನವಾಗಿರುತ್ತದೆ. ಇದಲ್ಲದೆ ಹಲವಾರು ವಿಶೇಷ ಮನ್ನಣೆಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಪ್ರಶಸ್ತಿಯನ್ನು ಘಟಕದ ಯಶಸ್ವಿ ಅಧ್ಯಕ್ಷರಾದ ಜೇಸಿ ಜಯೇಶ್ ಬರೆಟ್ಟೊರವರು ವಲಯಾಧ್ಯಕ್ಷರಾದ ಜೇಸಿ ಸಂದೀಪ್ ಕುಮಾರ್ರವರಿಂದ ಪಡೆದುಕೊಂಡರು. ಈ ಸಂದರ್ಭದಲ್ಲಿ ಜೇಸಿ ರಾಷ್ಟ್ರೀಯ ಪೂರ್ವ ನಿರ್ದೇಶಕರಾದ ಜೇಸಿ ಸೆನೆಟರ್ ಸಂಪತ್ ಬಿ.ಸುವರ್ಣ, ಘಟಕದ ಕಾರ್ಯದರ್ಶಿ ಜೇಸಿ ರಾಜೇಶ್ ಪಿ, ಪೂರ್ವಾಧ್ಯಕ್ಷರಾದ ಜೇಸಿ ಶ್ರೀಧರ್, ಜೇಸಿ ಮೇಧಾವಿ ಎಂ, ಘಟಕಾಡಳಿತ ಮಂಡಳಿಯ ಸದಸ್ಯರು, ಜೆಜೆಸಿ ಅಧ್ಯಕ್ಷೆ ಜೆಜೆಸಿ ಸ್ಟೆಫಿ ಅಂದ್ರಾದೆ ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.