HomePage_Banner_
HomePage_Banner_
HomePage_Banner_

ಪವರ್ ಆನ್ ಬ್ಯಾಟರಿ 2ನೇ ಶಾಖೆ ಶುಭಾರಂಭ

venur power an battery opening copyವೇಣೂರು : ತಾಲೂಕಿನಾದಂತ್ಯ ಗುಣಮಟ್ಟದ ಹಾಗೂ ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುವ ಎಲ್ಲರ ಮನೆ ಮಾತಾಗಿರುವ ಬ್ಯಾಟರಿ ಸಂಸ್ಥೆಯಲ್ಲೊಂದಾದ ಪವರ್ ಆನ್ ಬ್ಯಾಟರಿಯ 2ನೇ ಶಾಖೆಯು ವೇಣೂರು ಪೋಷ್ಟ್ ಆಫೀಸ್ ಹತ್ತಿರವಿರುವ ಅರಿಹಂತ ಕಾಂಪ್ಲೇಕ್ಸ್‌ನಲ್ಲಿ ಜೂ-17ರಂದು ಶುಭಾರಂಭಗೊಂಡಿತು.
ಸಂಸ್ಥೆಯ ಉದ್ಘಾಟನೆಯನ್ನು ಮಾಲಕ ಶೀತಲ್ ಜೈನ್‌ರವರ ಮಾತಾ-ಪಿತರಾದ ಶ್ರೀಮತಿ ವಿನೋದ ಪಾರ್ಶ್ವನಾಥ ಜೈನ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಸಂಸ್ಥೆಯು ಉತ್ತಮ ರೀತಿಯಲ್ಲಿ ಬೆಳೆದು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಲ್ಡಿಂಗ್ ಮಾಲಕರಾದ ಭರತ್‌ಕುಮಾರ್ ಜೈನ್, ವೇಣೂರು ಗ್ರಾ.ಪಂ ಉಪಾಧ್ಯಕ್ಷ ಅರುಣ್ ಕ್ರಾಸ್ತ, ಪಾರ್ಶ್ವನಾಥ ಪ್ರಿಂಟರ‍್ಸ್‌ನ ಸುದತ್ ಜೈನ್, ಉಜಿರೆ ಪವರ್ ಹೌಸ್ ಬ್ಯಾಟರಿಯ ಜಿತೇಶ್ ಜೈನ್, ಅರಿಹಂತ ಜೈನ್ ಅಳದಂಗಡಿ, ಪ್ರದೀಪ್ ಜೈನ್ ಶಿರ್ಲಾಲು, ಅಕ್ಷಯ್ ಜೈನ್ ಅಳದಂಗಡಿ, ಶಿರ್ಲಾಲು ಗಾ.ಪಂ ಸದಸ್ಯ ಹರ್ಷಾ ಆರ್. ಜೈನ್, ಉಜಿರೆ ತ್ರಿಲೋಕ್ ಡ್ಯಾನ್ಸ್‌ನ ಮಾಲಕ ಸುಧೀರ್ ಜೈನ್ ಬಳಂಜ, ಅರುಣ್ ಜೈನ್ ವೇಣೂರು ಮೊದಲಾದವರು ಉಪಸ್ಥಿತರಿದ್ದರು. ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಶೀತಲ್ ಜೈನ್ ಸ್ವಾಗತಿಸಿ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.