ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಭೆ, ಪ್ರತಿಭಾ ಪುರಸ್ಕಾರ

gowda 1

gowda 2

gowda 3

gowda

ವಿದ್ಯಾ ಸಂಸ್ಥೆ ಕಟ್ಟುವುದು ದೇವಾಲಯಕ್ಕಿಂತಲೂ ಮಿಗಿಲಾದ ಪುಣ್ಯ ಕೆಲಸ : ನಾರಾಯಣ ಬೇಗೂರು

ಬೆಳ್ತಂಗಡಿ : ಕೋಟಿಗಟ್ಟಲೆ ಹಣ ಸುರಿದು ದೇವಾಲಯ ಕಟ್ಟಬಹುದು ಆದರೆ ಅದರಲ್ಲಿ ಒಂದು ಧರ್ಮೀಯರು ಮಾತ್ರ ಬಂದು ಆರಾದನೆಗಳನ್ನು ಮಾಡಿ ತೆರಳಬಹುದು. ಆದರೆ ವಿದ್ಯಾ ಸಂಸ್ಥೆ ಕಟ್ಟುವುದರಿಂದ ಅಲ್ಲಿ ಎಲ್ಲಾ ಜಾತಿ-ಧರ್ಮದವರೂ ಬಂದು ವಿದ್ಯೆ ಮತ್ತು ಜ್ಞಾನ ಸಂಪಾದಿಸಿಕೊಂಡು ಸಮಾಜಕ್ಕೆ ಅರ್ಪಿತವಾಗುತ್ತಾರೆ. ಅಂತಹಾ ಕಾರ್ಯ ಮಾಡುವವರೇ ನಮ್ಮ ಕಣ್ಣಮುಂದೆ ಕಾಣುವ ದೇವರುಗಳು ಎಂದು ಬೆಂಗಳೂರಿನ ಉದ್ಯಮಿ, ದರ್ಮದರ್ಶಿ ನಾರಾಯಣ ಬೇಗೂರು ಹೇಳಿದರು.
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಜೂ. 20 ರಂದು ಇಲ್ಲಿನ ವಾಣಿ ಕ್ಯಾಂಪಸ್‌ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ವಿವಿಧ ಜವಾಬ್ಧಾರಿಯುತರಾದ ಜಯಶ್ರೀ ಡಿ.ಎಂ. ಗೌಡ, ಸೋಮೇ ಗೌಡ, ನಾರಾಯಣ ಗೌಡ ದೇವಸ್ಯ, ಸವಿತಾ ಜಯದೇವ್, ಲೋಕೇಶ್ವರೀ ವಿನಯಚಂದ್ರ, ದುಗ್ಗಪ್ಪ ಗೌಡ ಪೊಸೊಂದೋಡಿ, ಓಬಯ್ಯ ಗೌಡ, ತಿಮ್ಮಪ್ಪ ಗೌಡ ಬೆಳಾಲು, ಗಣೇಶ್ ಗೌಡ ಕಡಿರುದ್ಯಾವರ, ಮೋಹನ ಗೌಡ ಪುತ್ಯೆ, ಧರ್ಣಪ್ಪ ಗೌಡ ಬಂದಾರು, ರಾಮಚಂದ್ರ ಗೌಡ ಪದ್ಮುಂಜ, ಧರ್ಣಪ್ಪ ಟೈಲರ್, ದೇವಪ್ಪ ಗೌಡ ಇವರುಗಳು ಉಪಸ್ಥಿತರಿದ್ದರು.
ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಈ ಸಮಾರಂಭದಲ್ಲಿ ಸಮಾಜದ ವಿದ್ಯಾರ್ಥಿಗಳಾಗಿದ್ದು ಕ್ರೀಡೆ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಪುರಸ್ಕರಿಸಲಾಯಿತು. ತಾ.ಪಂ. ಚುನಾವಣೆಯಲ್ಲಿ ಜಯಗಳಿಸಿದ ಒಟ್ಟು 6 ಮಂದಿಯ ಪೈಕಿ ಜಯಶೀಲಾ, ಕೊರಗಪ್ಪ ಗೌಡ, ಸುಶೀಲಾ, ಅನಿತಾ, ಇವರನ್ನು ಸನ್ಮಾನಿಸಲಾಯಿತು. ನಾರಾಯಣ ಬೇಗೂರು ದಂಪತಿಯನ್ನು ಅಭಿನಂದಿಸಲಾಯಿತು. ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಡಿ. ಆನಂದ ಗೌಡ ಧನ್ಯವಾದವಿತ್ತರು. ಬಳಿಕ ಸಂಘದ ಮಹಾಸಭೆ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.