ನಿತ್ಯ ನಿಯಮಿತ ಯೋಗದಿಂದ ರೋಗ ಮುಕ್ತ ಸದೃಢತೆ ಪ್ರಾಪ್ತಿ : ಡಾ| ಹೆಗ್ಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Dharmastala yoga dina 1 copy

Dharmastala yoga dina 2 copy

Dharmastala yoga dina 3 copy

Dharmastala yoga dina 4 copy

Dharmastala yoga dina copy

Dharmastala yoga udgatane copy

ಧರ್ಮಸ್ಥಳದಲ್ಲಿ
ವಿಶ್ವ ಯೋಗ ದಿನಾಚರಣೆ

ಧರ್ಮಸ್ಥಳ : ದಿನಕ್ಕೊಂದು ಸೇಬು ಸೇವನೆ ಮಾಡುವುದರಿಂದ ವೈದ್ಯರಿಂದ ದೂರವಿರಬಹುದೆಂಬ ಹಳೆಯ ನಾನ್ನುಡಿಯನ್ನು ಈಗ ಬದಲಾಯಿಸಿ ಪ್ರತಿ ದಿನ ನಿಯಮಿತ ಯೋಗ ಮಾಡುವುದರಿಂದ ರೋಗದಿಂದ ಮತ್ತು ವೈದ್ಯರಿಂದ ದೂರವಿರಬಹುದು ಎಂಬುದಾಗಿ ಬದಲಾಯಿಸಿಕೊಳ್ಳಬಹುದಾಗಿದೆ. ನಿತ್ಯ ನಿಯಮಿತವಾಗಿ ಯೋಗಭ್ಯಾಸದಿಂದ ಒತ್ತಡ ನಿವಾರಣೆಯಾಗಿ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಜೂ.21 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ವಿಶ್ವಯೋಗ ದಿನಾಚರಣೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಆಯ್ದ ಪ್ರತಿನಿಧಿಗಳಿಗೆ, ಯೋಜನಾಧಿಕಾರಿಗಳಿಗೆ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಸಂಯೋಜನೆಯಲ್ಲಿ ನಡೆದ ಯೋಗ ತರಭೇತಿಯ ಸಮಾರೋಪ ಮತ್ತು ಶಿಬಿರಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಕುಲಪತಿಗಳೂ ಆಗಿರುವ ಬೆಂಗಳೂರಿನ ಖ್ಯಾತ ಹೃದಯ ರೋಗ ತಜ್ಞ ಡಾ| ಕೆ.ಎಸ್. ರವೀಂದ್ರನಾಥ್ ಮಾತನಾಡಿ, ಮನುಷ್ಯನ ಈಗಿನ ರೋಗಗಳು ದೇಹಕ್ಕೆ ಸಂಬಂಧಿಸಿದ್ದಕ್ಕಿಂತಲೂ ಮನಸ್ಸಿಗೆ ಸಂಬಂಧಿಸಿದ್ದಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಒತ್ತಡದಿಂದ ಜೀವಿಸುವ ಮನುಷ್ಯರ ಈ ರೋಗಕ್ಕೆ ಔಷಧಿ ಇಲ್ಲ. ಯೋಗ ಮತ್ತು ಧ್ಯಾನ, ನಿಯಮಿತ ವ್ಯಾಯಾಮದಿಂದ ಮಾತ್ರ ಇದನ್ನು ನಿಯಂತ್ರಿಸಬಹುದು. ನಿತ್ಯದ ಔಷಧಿ  ಸೇವಿಸದೆ ನಮ್ಮನ್ನು ನಾವೇ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಬಿ.ಪಿ, ಶುಗರ್ ಕಾಯಿಲೆಯಿಂದ ನಿತ್ಯ ಮಾತ್ರೆ ಸೇವಿಸುವ ರೋಗವೇ ಆಗಿದ್ದರೂ ಅದರ ಪ್ರಮಾಣವನ್ನು ಕಡಿಮೆಗೊಳಿಸಿಕೊಳ್ಳಬಹುದು ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದೇಶದಲ್ಲಿ 750 ವಿ.ವಿ. ಗಳಲ್ಲಿ ೫೦ ಲಕ್ಷ ಎನ್‌ಎಸ್‌ಎಸ್ ಸ್ವಯಂ ಸೇವಕರಿದ್ದಾರೆ. ಎನ್‌ಎಸ್‌ಎಸ್ ಮೂಲಕ ಅವರಿಗೆ ಶಿಬಿರಗಳಲ್ಲಿ ಯೋಗ ಕಡ್ಡಾಯಗೊಳಿಸಲಾಗಿದೆ. ಧರ್ಮಸ್ಥಳ ಕ್ಷೇತ್ರದಿಂದ 25 ವರ್ಷಗಳ ಹಿಂದೆಯೇ ಡಾ| ಹೆಗ್ಗಡೆಯವರು ಯೋಗದ ಮಹತ್ವ ಅರಿತು ಕಾರ್ಯವೆಸಗಿರುವುದು ಶ್ಲಾಘನೀಯ ಎಂದರು.
ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಡಾ| ವಿಜಯ ಪ್ರಕಾಶ್ ಮಾತನಾಡಿ, ಎನ್‌ಎಸ್‌ಎಸ್‌ನಲ್ಲಿ ಯೋಗ ಕಡ್ಡಾಯಗೊಳಿಸಿದ ಏಕೈಕ ರಾಜ್ಯ ಕರ್ನಾಟಕ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನೇಕ ಜನಪರ ಕಾರ್ಯಗಳು ವಿವಿಧ ವಿಭಾಗಗಳ ಮೂಲಕ ಅನುಷ್ಠಾನವಾಗುತ್ತಿದ್ದು ಮಾದರಿಯಾಗಿದೆ ಎಂದರು.
ಉಜಿರೆ ಶ್ರೀ ಜನಾರ್ದನ ದೇವಾಲಯದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ, ರಾಜೀವ ಗಾಂಧಿ ವಿ.ವಿ. ಯ ಪ್ರಾಂತೀಯ ನಿರ್ದೇಶಕ ಅರುಣ್ ಪೂಜಾರ್, ವಿವಿಯ ಎನ್‌ಎಸ್ಸೆಸ್ ಕಾರ್ಯಕ್ರಮ ಸಂಯೋಜಕ ಡಾ| ಬಿ ವಸಂತ ಶೆಟ್ಟಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಜೀವಂಧರ ಕುಮಾರ್, ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಕಾಲೇಜಿನ ಡೀನ್ ಡಾ| ಶಿವಪ್ರಸಾದ್ ಮತ್ತು ಪ್ರಕೃತಿ ಚಿಕಿತ್ಸಾ ಡೀನ್ ಡಾ| ಸುಜಾತಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ| ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ| ಶಶಿಕಾಂತ್ ಜೈನ್ ವಂದಿಸಿದರು. ಡಾ| ಮೇಘಾ ಕಾರ್ಯಕ್ರಮ ನಿರೂಪಿಸಿ ಯೋಗ ಪ್ರಾತ್ಯಕ್ಷಿಕೆಯ ಉದ್ಘೋಶ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.