ಅರಸಿನಮಕ್ಕಿ : ರಿಕ್ಷಾ ಪಲ್ಟಿ – ಇಬ್ಬರಿಗೆ ಗಾಯ

ಅರಸಿನಮಕ್ಕಿ : ಅರಸಿನಮಕ್ಕಿ ಎಂಬಲ್ಲಿ ರಿಕ್ಷಾ ಪಲ್ಟಿಯಾಗಿ ಚಾಲಕ ಹಾಗೂ ಅವರ ಪುತ್ರ ಗಾಯಗೊಂಡಿರುವ ಘಟನೆ ಜೂ.೨೦ರಂದು ನಡೆದಿದೆ.
ರಿಕ್ಷಾ ಚಾಲಕ, ಶಿಶಿಲ ಸತ್ತಿಕಲ್ಲು ನಿವಾಸಿ ಶ್ರೀಧರ್ ಹಾಗೂ ಅವರ ಪುತ್ರ ವಾರ್ತಿಕ್ ಗಾಯಾಳುಗಳು. ಕೊಕ್ಕಡದಲ್ಲಿರುವ ಗ್ಯಾರೇಜ್‌ಗೆ ರಿಕ್ಷಾ ರಿಪೇರಿಗೆಂದು ಹೋಗಿದ್ದರು. ಅಲ್ಲಿಂದ ಮರಳುವ ವೇಲೆ ಅರಸಿನಮಕ್ಕಿ ಶಾಲಾ ಸಮೀಪದಲ್ಲಿ ರಿಕ್ಷಾದಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.