HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕಾಪಿನಡ್ಕ-ನಿಟ್ಟಡ್ಕ-ಪೆರ್ಮುಡ ರಸ್ತೆ ಅಭಿವೃದ್ಧಿಗೆ ಶಾಸಕ ಬಂಗೇರರಿಗೆ ಮನವಿ

kapinatka nittadka raste ge shakarige manavi copy

ಬೆಳ್ತಂಗಡಿ : ವರ್ಲ್ಡ್ ಬ್ಯಾಂಕ್ ರಸ್ತೆ ನಿಧಿ ಯೋಜನೆಯನ್ವಯ ಕಾಪಿನಡ್ಕ-ನಿಟ್ಟಡ್ಕ-ಪೆರ್ಮುಡ ರಸ್ತೆ ಅಭಿವೃದ್ಧಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು ಇದನ್ನು ಶೀಘ್ರ ಮಂಜೂರುಗೊಳಿಸಬೇಕು ಎಂದು ಒತ್ತಾಯಿಸಿ ನಿಟ್ಟಡ್ಕ ಕಾಂಗ್ರೆಸ್ ನಿಯೋಗವು ಶನಿವಾರ ಶಾಸಕ ಕೆ. ವಸಂತ ಬಂಗೇರರಿಗೆ ಮನವಿ ನೀಡಿ ಒತ್ತಾಯಿಸಿತು. ಬಳಂಜ ಗ್ರಾ. ಪಂ. ವ್ಯಾಪ್ತಿಯ ಪ್ರಮುಖ ರಸ್ತೆ ಸಂಪರ್ಕ ಇದಾಗಿದ್ದು ಇದರಿಂದ ನೂರಾರು ಕುಟುಂಬಗಳಿಗೆ ಪ್ರಯೋಜನವಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಡ ತಂದು ರಸ್ತೆ ಮಂಜೂರುಗೊಳಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ನಿಯೋಗದಲ್ಲಿ ಜಿ. ಪಂ. ಸದಸ್ಯ ಶೇಕರ ಕುಕ್ಕೇಡಿ, ತಾ. ಪಂ. ಸದಸ್ಯೆ ವಿನುಷಾ ಪ್ರಕಾಶ್, ತಾ. ಪಂ. ಮಾಜಿ ಸದಸ್ಯ ಹೆಚ್ ಧರ್ಣಪ್ಪ ಪೂಜಾರಿ, ಬಳಂಜ ಗ್ರಾ. ಪಂ. ಸದಸ್ಯರಾದ ಚಂದ್ರಶೇಖರ ಪಿ. ಕೆ., ಸುರೇಶ್ ಶೆಟ್ಟಿ ಕುರೇಲ್ಯ, ಪಡಂಗಡಿ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಯೋಗೀಶ್ ಕುಮಾರ್ ಕೆ. ಎಸ್., ಪ್ರಮುಖರಾದ ರಮನಾಥ ಶೆಟ್ಟಿ, ಸದಾನಂದ ಸಾಲಿಯಾನ್, ಹರೀಶ್ ವೈ, ಗಿರೀಶ್ ಬಂಗೇರ, ಪ್ರವೀಣ್ ಎಚ್, ಎಸ್., ನಿತ್ಯಾನಂದ ಹೆಗ್ಡೆ, ತಿಮ್ಮಪ್ಪ ಪೂಜಾರಿ, ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.