HomePage_Banner_
HomePage_Banner_
HomePage_Banner_

ಭಾರತೀಯ ಜನತಾ ಪಾರ್ಟಿಯ ನೂತನ ಅಧ್ಯಕ್ಷರಾಗಿ ರಂಜನ್ ಜಿ ಗೌಡ

Advt_NewsUnder_1

Ranjan - copyಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ತಾಲೂಕು (ಮಂಡಲ) ಇದರ ನೂತನ ಅಧ್ಯಕ್ಷರಾಗಿ ರಂಜನ್ ಜಿ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ತಾಲೂಕು ಯುವ ಮೋರ್ಚಾ ಅಧ್ಯಕ್ಷರಾಗಿದ್ದ ರಂಜನ್ ಜಿ ಗೌಡ ಅವರು ಬಳಿಕ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾಗಿ ಪಕ್ಷದ ಸಕ್ರೀಯ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ. ಮಾಜಿ ಸಚಿವ ಹಾಗು ತನ್ನ ತಂದೆ ಗಂಗಾಧರ ಗೌಡ ಅವರು ಅಧ್ಯಕ್ಷರಾಗಿ ಮುನ್ನಡೆಸುತ್ತಿರುವ ಪ್ರಸನ್ನ ಎಜುಕೇಶನಲ್ ಟ್ರಸ್ಟ್ ಲಾಯಿಲ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ಕೆ. ಜಿ ಯಿಂದ ಪ್ರಾರಂಭಗೊಂಡು ಇಂಜಿಯರಿಂಗ್‌ವರೆಗಿನ ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅತ್ಯುತ್ತಮ ವಾಲಿಬಾಲ್ ಪಟುವೂ ಆಗಿರುವ ಅವರು ಕ್ರೀಡಾ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದು ಕೊಡುಗೈ ದಾನಿಯೂ ಆಗಿದ್ದಾರೆ. ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಚುನಾವಣಾ ಅಖಾಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗ ಗಣನೀಯ ಮತಗಳನ್ನು ಪಡೆದು ಎಲ್ಲರ ಗಮನೆಸೆಳೆದಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.