ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರರಿಗೆ ಸಚಿವ ಸ್ಥಾನ ಬೆಂಬಲಿಗರ ಆಗ್ರಹ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Vasanth Bangera Recent copyಬೆಳ್ತಂಗಡಿ : 45  ವರ್ಷದ ರಾಜಕೀಯ ಅನುಭವದೊಂದಿಗೆ 5  ಬಾರಿ ಶಾಸಕರಾಗಿರುವ ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರರಿಗೆ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಆಗ್ರಹಿಸಿದ್ದಾರೆ.
ಈ ಬಾರಿ ಎಲ್ಲರೂ ನಿರೀಕ್ಷೆ ಮಾಡಿದ್ದರೂ ಬಹುನಿರೀಕ್ಷಿತ ಸಚಿವ ಸ್ಥಾನ ದೊರೆಯದೇ ಕ್ಷೇತ್ರದ ಜನತೆಗೆ ನಿರಾಸೆಯಾಗಿದೆ. ಹಿರಿಯ ರಾಜಕಾರಣಿಯಾಗಿದ್ದರೂ ಮೂರೂ ಪಕ್ಷಗಳಲ್ಲಿ ಸ್ಪರ್ಧಿಸಿ ಗೆದ್ದ ಅಪೂರ್ವ ಇತಿಹಾಸ ಹೊಂದಿದ್ದರೂ ಬಂಗೇರರನ್ನು ಕಡೆಗಣಿಸಲಾಗಿದೆ ಎಂದು ಬೆಂಬಲಿಗರು ದೂರುತ್ತಿದ್ದಾರೆ.

ಕೆ.ವಸಂತ ಬಂಗೇರ, ಇವರು ಬೆಳ್ತಂಗಡಿ ತಾಲೂಕನ್ನು ಶಾಸಕರಗಿ ೫ ಬಾರಿ ಪ್ರತಿನಿಧಿಕರಿಸಿದವರು ಮತ್ತು ಪ್ರಾಮಾಣಿಕ ಹಾಗೂ ಜನಸೇವೆಗೆ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿ ಭ್ರಷ್ಟಾಚಾರಕ್ಕೆ ಎಂದೂ ಆಸ್ಪದ ಕೊಟ್ಟವರಲ್ಲ ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ಕೆ.ಹರೀಶ್ ಕುಮಾರ್ ಮತ್ತು ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಾಮಚಂದ್ರ ಗೌಡ ತಿಳಿಸಿದರು.

ಬೆಳ್ತಂಗಡಿ ಶಾಸಕರಾದ ಇವರನ್ನು ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸಬೇಕೆಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಉಪಾಧ್ಯಕ್ಷರಾದ ಪೀತಾಂಬರ ಹೇರಾಜೆ ಮನವಿ ನೀಡಿದ್ದಾರೆ.
ಸರಕಾರದ ಕಾರ್ಯಕ್ರಮಗಳನ್ನು ವೃತ್ತಿಧರ್ಮವೆಂದು ತಿಳಿದು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದವರು. ಅತ್ಯಂತ ಹಿಂದುಳಿದ ಬೆಳ್ತಂಗಡಿ ತಾಲೂಕಿನ ಸಮಗ್ರ ಅಭಿವೃದ್ಧಿಯನ್ನು ಮಾಡಿದ ಮಹಾನ್ ಸಾಧಕರು.
ಸ್ವಾರ್ಥರಹಿತ ಸೇವೆ ಮಾಡಿ ಮತದಾರರಿಗೆ ನ್ಯಾಯ ಒದಗಿಸಿಕೊಟ್ಟ ರಾಜಕೀಯ ನೇತಾರ. ಬೆಳ್ತಂಗಡಿ ತಾಲೂಕಿನ ಸಮಸ್ತ ಜನ ಸಮುದಾಯ ಕೆ.ವಸಂತ ಬಂಗೇರರಿಗೆ ಸಚಿವ ಸ್ಥಾನ ನೀಡಿ ನ್ಯಾಯ ಒದ[ಗಿಸಿ ಕೊಡಬೇಕೆಂದು ಒಕ್ಕೊರಲ ವಿನಂತಿ ಮಾಡುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ದೊರಕುವಂತೆ ಕಳಕಳಿಯ ವಿನಂತಿ ಮಾಡುತ್ತೇವೆ. ಬರೆ ಬೆಳ್ತಂಗಡಿ ತಾಲೂಕು ಮಾತ್ರವಲ್ಲ ಸಮಗ್ರ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಜನಾನುರಾಗಿ ನಾಯಕ.
ಕಳೆದ ಮೂರು ದಶಕಗಳಿಂದ ಈ ಕ್ಷೇತ್ರ, ಸಚಿವ ಸ್ಥಾನದಿಂದ ವಂಚಿತವಾಗಿದೆ. ನಮ್ಮ ಕೇಳಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಪರಿಗಣಿಸಿ ನಮ್ಮ ಬೇಡಿಕೆಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸುತ್ತೇವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.