ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ವಿಶಿಷ್ಠ ವಿನೂತನ ಕಾರ್ಯಕ್ರಮ ಶಿಕ್ಷಣಕ್ಕಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ದತ್ತು ಸ್ವೀಕಾರ

Advt_NewsUnder_1
Advt_NewsUnder_1
Advt_NewsUnder_1

blt billava sangadinda dattu swikara copyಶಿಕ್ಷಣಕ್ಕಾಗಿ ದತ್ತು ಸ್ವೀಕಾರಕ್ಕೆ ಪ್ರೋತ್ಸಾಹ ನೀಡಿದವರು

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆಯ ಪದಾಧಿಕಾರಿಗಳ ಒಗ್ಗಟ್ಟಿನಿಂದ ಈ ಬಾರಿ 13  ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸಂಘವು ದತ್ತು ಸ್ವೀಕರಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಶ್ರೀ ಗುರುದೇವ ಕಾಲೇಜಿಗೆ ಪ್ರವೇಶ ಕಲ್ಪಿಸುವಲ್ಲಿ ಸಹಾಯಧನ ನೀಡಿರುವ ದಾನಿಗಳಾದ ಜಗದೀಶ್ ಲಾಯಿಲ, ಹರೀಶ್ ಕುಮಾರ್ ನಡಕ್ಕರ, ಚರಣ್ ಕುಮಾರ್ ಕುರ್ತೊಡಿ, ಹೆಚ್. ಧರ್ಣಪ್ಪ ಪೂಜಾರಿ ನಾಲ್ಕೂರು, ರವೀಂದ್ರ ಪೂಜಾರಿ, ಯುವವಾಹಿನಿ ಘಟಕ ಬೆಳ್ತಂಗಡಿ, ಚಿದಾನಂದ ಇಡ್ಯ, ತನುಜಾ ಶೇಖರ್, ಭಗೀರಥ ಜಿ, ನಾರಾಯಣ ಸುವರ್ಣ, ಸುಜಾತ ಅಣ್ಣಿಪೂಜಾರಿ, ಪ್ರೇಮಾ ಉಮೇಶ್, ವಸಂತ ಸಾಲ್ಯಾನ್ ಕಾಪಿನಡ್ಕ, ಜಯಶಂಕರ್, ಕೊರಗಪ್ಪ ಪೂಜಾರಿ ಸವಣಾಲು, ಸುರೇಶ್ ಕುಮಾರ್ ಸವಣಾಲು, ಜಿನ್ನಪ್ಪ ಪೂಜಾರಿ ಕಳೆಂಜ ರವರು ನೀಡುವಲ್ಲಿ ಶ್ರಮಿಸಿದ್ದಾರೆ.

ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ ಹಾಗೂ ದಾನಿಗಳ ಸಹಕಾರದೊಂದಿಗೆ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಣಕ್ಕಾಗಿ ದತ್ತು ಸ್ವೀಕಾರ ಕಾರ್ಯಕ್ರಮವು ಜೂ. 11 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆಯಿತು.
ವಿದ್ಯೆಯೆಂಬುದು ಬೆಲೆ ಕಟ್ಟಲಾಗದ ದೊಡ್ಡ ಆಸ್ತಿಯಾಗಿದ್ದು ವಿದ್ಯೆಯಿಂದ ಯಾರು ವಂಚಿತರಾಗಬಾರದು. ಹಣ, ಅಂತಸ್ತು ಯಾವುದನ್ನು ಬೇಕಾದರು ಕಳೆದುಕೊಳ್ಳಬಹುದು, ವಿದ್ಯೆಯನ್ನು ಯಾರಿಂದಲೂ ಕಸಿಯಲಾಗದು ಎಂಬ ಉದ್ದೇಶವನ್ನು ಇಟ್ಟುಕೊಂಡು ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘವು ಬಿಲ್ಲವ ಸಮಾಜದ ಬಡ ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ತಾಲೂಕಿನ ಬೇರೆ ಬೇರೆ ಕಡೆಯ ವಿದ್ಯಾರ್ಥಿಗಳಾದ ಕವಿತಾ ನಡ, ಸೌಜನ್ಯ ಪುತ್ತಿಲ, ಶ್ರಾವ್ಯ ಉರುವಾಲು, ನಿಕ್ಷೀತಾ ಕಳೆಂಜ, ಅಕಿಲೇಶ್ ನಡ, ರನಿತಾ ಕರಾಯ, ಯಶಸ್ವಿನಿ ಸವಣಾಲು, ಧನುಶ್ ಮುಂಡೂರು, ಜೀವನ್ ಕಳೆಂಜ, ದೀಪಕ್ ತೆಂಕಕಾರಂದೂರು, ಶುಭಲತಾ ಸವಣಾಲು, ಸುಶ್ಮಿತಾ ಬಜಿರೆ, ಹರ್ಷಿತಾ ಬೆಳ್ತಂಗಡಿ. ಈ 13 ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಣಕ್ಕಾಗಿ ಸಂಘವು ದತ್ತು ಸ್ವೀಕರಿಸಿದೆ. ದಾನಿಗಳ ನೆರವಿನೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಸಂಘವು ಭರಿಸಲಿದೆ, ಈ ಎಲ್ಲಾ ವಿದ್ಯಾರ್ಥಿಗಳ ಮುಂದಿನ ಪಿಯುಸಿ ಹಾಗೂ ಡಿಗ್ರಿ ವಿದ್ಯಾಭ್ಯಾಸಕ್ಕಾಗಿ ಶ್ರೀ ಗುರುದೇವ ಕಾಲೇಜು ಬೆಳ್ತಂಗಡಿಗೆ ಪ್ರವೇಶವನ್ನು ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಕಾಲೇಜಿನ ಪ್ರವೇಶ ಅರ್ಜಿ ಪ್ರತಿಯನ್ನು ಸಂಘದ ಅಧ್ಯಕ್ಷ ಭಗೀರಥ ಜಿ. ಯವರು ಕಾಲೇಜಿನ ಟ್ರಸ್ಟಿ ಹಾಗೂ ಸಂಘದ ಉಪಾಧ್ಯಕ್ಷರಾದ ಸುಜಿತಾ ವಿ. ಬಂಗೇರರವರಿಗೆ ಹಸ್ತಾಂತರಿಸಿದರು. ದಾನಿಗಳಿಂದ ಸಂಗ್ರಹಿಸಿದ ಮೊತ್ತವನ್ನು ಚೆಕ್ ಮುಖಾಂತರ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ಪ ಪೂಜಾರಿಗೆ ಹಸ್ತಾಂತರಿಸಲಾಯಿತು.
ಸಂಘಟನೆಯಿಂದ ಬಲಯುತರಾಗಿ, ವಿದ್ಯೆಯಿಂದ ಸ್ವತಂತ್ರರಾಗಿರಿ ಎಂಬ ಶ್ರೀ ನಾರಾಯಣ ಗುರುಗಳ ಆಶಯದಂತೆ ಸಂಘದ ಅಧ್ಯಕ್ಷ ಭಗೀರಥ ಜಿ. ಪದಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಬಿಲ್ಲವ ಸಮಾಜದ ಮಕ್ಕಳ ಶೈಕ್ಷಣಿಕ ಏಳಿಗೆಗೆ ವಿಶೇಷ ಕಾರ್ಯ ಯೋಜನೆ ಹಾಕಿಕೊಂಡಿದ್ದು ಇದರ ಮೊದಲ ಪ್ರಯತ್ನವಾಗಿ ಕೆಲ ತಿಂಗಳ ಹಿಂದೆ ಸಮಾಜದ ವಿದ್ಯಾರ್ಥಿಗಳಿಗಾಗಿ ಪರೀಕ್ಷಪೂರ್ವ ತರಬೇತಿಯನ್ನು ಶಿಸ್ತುಬದ್ಧವಾಗಿ ಆಯೋಜಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಸಫಲರಾಗಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರ. ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಕೋಶಾಧಿಕಾರಿ ಶೇಖರ್ ಬಂಗೇರ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ತನುಜಾ ಶೇಖರ್ ಹಾಗೂ ಸಂಘದ ನಿರ್ದೇಶಕರು ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.