ಬಳಂಜ : ಬಿಲ್ಲವ ಸಂಘದಲ್ಲಿ ಧತ್ತಿನಿಧಿಯ ಪುಸ್ತಕ ವಿತರಣಾ ಕಾರ್ಯಕ್ರಮ ವಿದ್ಯೆಯ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸೋಣ

Advt_NewsUnder_1
Advt_NewsUnder_1
Advt_NewsUnder_1

balanja bilava sanga pustaka vitarane copy ಬಳಂಜ : ಜೀವನ ಎಂದರೆ ಸ್ಪೋಟ್ಸ್‌ಟ್ರಾಕ್ ಇದ್ದಂತೆ, ಗುರಿಯಿಲ್ಲದೆ ಟ್ರಾಕ್ ಕ್ರಾಸ್ ಮಾಡಿ ಮೊದಲಿಗನಾದರು ಅವನನ್ನು ಯಾರು ಗುರುತಿಸುವುದಿಲ್ಲ. ಹಾಗೆಯೇ ಜೀವನ ಕೂಡ, ತನ್ನಲ್ಲಿ ಎಷ್ಟೇ ಶ್ರೀಮಂತಿಕೆ ಇದ್ದರೂ ಶಿಕ್ಷಣ, ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸದಿದ್ದರೆ ಅಂತವರನ್ನು ಕೂಡ ಯಾರು ಗುರುತಿಸುವುದಿಲ್ಲ. ಅದಕ್ಕೆ ವಿದ್ಯೆ ಅತೀ ಮುಖ್ಯ ಎಂದು ಬಳಂಜ ಬಿಲ್ಲವ ಸಂಘದ ಗೌರವಾಧ್ಯಕ್ಷ ಹಾಗೂ ತಾ.ಪಂ ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ ಅವರು ಅಭಿಪ್ರಾಯಪಟ್ಟರು.
ಅವರು ಜೂ. 12 ರಂದು ಸಂಘದ ವಠಾರದಲ್ಲಿ ನಡೆದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬಳಂಜ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ ನಾಲ್ಕೂರು, ತೆಂಕಕಾರಂದೂರು ಇದರ ಆಶ್ರಯದಲ್ಲಿ ಹಾಗೂ ಧತ್ತಿನಿಧಿಯಿಂದ ನೀಡಲ್ಪಡುವ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ. ಮಾತನಾಡಿ ಇಂದು ನಮ್ಮ ಸಮಾಜದಲ್ಲಿ ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ, ಅದಕ್ಕೆ ನಮ್ಮ ಸಂಘವು ಹಾಗೂ ಎಲ್ಲಾ ಕಡೆಯೂ ಶಿಕ್ಷಣಕ್ಕೆ ಪ್ರೋತ್ಸಾಹ ದೊರೆಯುತ್ತದೆ. ಇಲ್ಲಿ ಪುಸ್ತಕ ಪಡೆದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅದರ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿ ಎಂದರು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರ. ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತದಂತೆ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆ ಯಿಂದ ಬಲಯುತರಾಗಿರಿ ಎಂಬ ಮಾತಿನಂತೆ ಬಳಂಜ ಬಿಲ್ಲವ ಸಂಘದಲ್ಲಿ ಸತತ ೧೫ ವರ್ಷಗಳಿಂದ ಸಮಾಜದ ಅಗಲಿದ ಹಿರಿಯ ಚೇತನಗಳ ನೆನಪಿಗಾಗಿ ಅವರ ಮನೆಯವರು ನೀಡುವ ಧತ್ತಿನಿಧಿಯಿಂದ ಪುಸ್ತಕವನ್ನು ನೀಡುತ್ತಿದ್ದು ತಾಲೂಕಿನಲ್ಲಿಯೇ ವಿನೂತನ ಹಾಗೂ ವಿಶಿಷ್ಟವಾಗಿದ್ದು ಪುಸ್ತಕವನ್ನು ಪಡೆದ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣವನ್ನು ಪಡೆದು ತಮ್ಮ ಅಭಿವೃದ್ಧಿಯ ಜೊತೆಗೆ ಊರಿಗೆ ಕೀರ್ತಿ ತರಬೇಕು ಎಂದರು.
ಈ ಸಂದರ್ಭದಲ್ಲಿ ಅಗಲಿದ ಹಿರಿಯ ಚೇತನಗಳ ಆತ್ಮ ಚಿರಶಾಂತಿಯಿರಲಿ ಎಂದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಲದ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪರಾರಿ ಸುಶ್ಮಿತಾರವರನ್ನು ಗೌರವಿಸ ಲಾಯಿತು. ಸಂಘದ ವತಿಯಿಂದ ಸುಮಾರು 70  ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.
ವೇದಿಕೆಯಲ್ಲಿ ಬಳಂಜ ಬಿಲ್ಲವ ಸಂಘದ ಅಧ್ಯಕ್ಷ ದಿನೇಶ್ ಪೂಜಾರಿ ಅಂತರ, ಪ್ರವೀಣ್ ಕುಮಾರ್ ಹೆಚ್.ಎಸ್ ಹೊಸಮನೆ, ದೇಜಪ್ಪ ಪೂಜಾರಿ ಸುಧಾಮ, ದಿನೇಶ್ ಕೋಟ್ಯಾನ್ ಕುದ್ರೋಟ್ಟು, ಜಗದೀಶ್ ತಾರಿಪಡ್ಪು, ಕಾರ್ಯದರ್ಶಿ ಪುರಂದರ ಪೆರಾಜೆ, ಪ್ರವೀಣ್ ಲಾಂತ್ಯಾರು,  ರಾಧಕೃಷ್ಣ ಅಲ್ಲಿಂತ್ಯಾರು, ನಾರಾಯಣ ಪೂಜಾರಿ ಹೇವ, ಬಾಬು ಪೂಜಾರಿ ಸುದೆರ್ದು, ವಸಂತ ಪೂಜಾರಿ ನಿರೋಳ್ಬೆ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆಯ ಪ್ರ. ಕಾರ್ಯದರ್ಶಿ ಸಂತೋಷ್ ಪಿ. ಕೋಟ್ಯಾನ್ ಬಳಂಜ ಸ್ವಾಗತಿಸಿ, ಸಂಘದ ಮಾಜಿ ಕಾರ್ಯದರ್ಶಿ ಸದಾನಂದ ಸಾಲಿಯನ್ ನಿರೂಪಿಸಿದರು. ಸಂಘದ ಎಲ್ಲಾ ಪದಾದಿಕಾರಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.