ಮಲ್‌ಜಅನಲ್ಲಿ ರಂಝಾನ್ ಲೈಲತುಲ್‌ಕದ್‌ರ್ ಪ್ರಾರ್ಥನಾ ಸಮ್ಮೇಳನದ ಬಗ್ಗೆ ಸಮಾಲೋಚನೆ ಸಭೆ

maljah meeting copyಕಾಶಿಬೆಟ್ಟು : ಲಾಯಿಲ ಗ್ರಾಮದ ಕಾಶಿಬೆಟ್ಟು ಮಲ್‌ಜಅ ಸಂಸ್ಥೆಯು ದಶಮಾನೋತ್ಸವದ ವರ್ಷದತ್ತ ದಾಪುಗಾಲಿಡುತ್ತಿದ್ದು ಆ ಹಿನ್ನೆಲೆಯಲ್ಲಿ ಈ ಬಾರಿಯ ರಂಝಾನ್ ತಿಂಗಳ ಜುಲೈ 1 ರಂದು 27 ನೇ ಉಪವಾಸದ ಲೈಲತುಲ್ ಖದರ್ನ ರಾತ್ರಿಯಂದು ವಿಶೇಷ ಆಧ್ಯಾತ್ಮಿಕ ಅನುಭೂತಿ ದೊರೆಯುವ ಪ್ರಾರ್ಥನಾ ಸಮ್ಮೇಳನವನ್ನು ರಾತ್ರಿ ಹಗಲಿನವರೆಗೆ ವೈವಿದ್ಯಮಯ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ನಡೆಸಲು ನಿರ್ಧರಿಸಿದ್ದು ಅದರ ಸಮಾಲೋಚನಾ ಸಭೆಯು ಜೂ. 12 ರಂದು ಮಲ್‌ಜಅ ನಲ್ಲಿ ನಡೆಯಿತು.
ಸಂಸ್ಥೆಯ ಚೇರ್‌ಮೆನ್ ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ಉಜಿರೆ ತಂಙಳ್ ನೇತೃತ್ವ ವಹಿಸಿ ವಿಷಯ ಮಂಡಿಸಿದರು. ವೇದಿಕೆಯಲ್ಲಿ ಸಯ್ಯಿದ್ ಸಾದಾತ್ ತಂಙಳ್ ಉಪ್ಪಿನಂಗಡಿ, ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಕಾಸಿಂ ಮದನಿ ಕರಾಯ, ಉಪಾಧ್ಯಕ್ಷ ಹೈದರ್ ಮದನಿ ಕರಾಯ, ಸುನ್ನೀ ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಎಂ.ಕೆ. ಬದ್ರುದ್ದೀನ್ ಹಾಜಿ ಪರಪ್ಪು, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಡಿವಿಷನ್ ಅಧ್ಯಕ್ಷ ಅಬ್ದುಲ್‌ರಹಿಮಾನ್ ಸಖಾಫಿ ನಾವೂರು, ಕೋಶಾಧಿಕಾರಿ ಕಾಸಿಂ ಮುಸ್ಲಿಯಾರ್ ಮಾಚಾರು, ಮೋನು ಹಾಜಿ ಕಕ್ಕಿಂಜೆ, ಅಬ್ದುಲ್ ರಹಿಮಾನ್ ಡೆಲ್ಮಾ ಸ್ಯಾನಿಟರಿ ಉಜಿರೆ, ಸುಲೈಮಾನ್ ಕುಂಟಿನಿ, ಅಬ್ಬೋನು ಬದ್ಯಾರ್, ಮಲ್‌ಜಅ ಮುದರ್ರಿಸ್ ಆಸಿಫ್ ಅಹ್‌ಸನಿ ಇವರುಗಳು ಉಪಸ್ಥಿತರಿದ್ದರು.
ಸಂಜೆ 5 ಗಂಟೆಗೆ ಪ್ರಾರಂಭವಾಗಲಿರುವ ವಿವಿಧ ಕಾರ್ಯಕ್ರಮಗಳು, ಆಧ್ಯಾತ್ಮಿಕ ಮಜ್ಲಿಸ್, ಮಲ್‌ಜಅ ದಿಕ್ರ್-ಸ್ವಲಾತ್ ಮಜ್ಲಿಸ್, ಸಾಮೂಹಿಕ ತೌಬಾ, ವಿವಿಧ ಸುನ್ನತ್ ನಮಾಝ್‌ಗಳು, ಆಧ್ಯಾತ್ಮಿಕ ಪ್ರಭಾಷಣ ಹೀಗೆ ರಾತ್ರಿಯಿಡೀ ಕ್ರಿಯಾಶೀಲ ಚಟುವಟಿಕೆಗಳು ನಡೆಯಲಿದೆ ಎಂದು ತಂಙಳ್ ವಿವರಿಸಿದರು. ಪತ್ರಕರ್ತ ಅಶ್ರಫ್ ಆಲಿಕುಂಞಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಜನರಲ್ ಮೆನೇಜರ್ ಶರೀಫ್ ಬೆರ್ಕಳ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.