ಅಳದಂಗಡಿ : ಉಚಿತ ಪುಸ್ತಕ ವಿತರಣೆ-ಪ್ರತಿಭಾ ಪುರಸ್ಕಾರ ಮಕ್ಕಳಲ್ಲಿ ತೃಪ್ತಿ-ಮಾನವೀಯತೆಯನ್ನು ಬೆಳೆಸಿ : ಸಂತೋಷ್ ಹೆಗ್ಡೆ

Advt_NewsUnder_1
Advt_NewsUnder_1
Advt_NewsUnder_1

aladangadi pustaka vitarane 1 copy  ಪುಸ್ತಕ ವಿತರಣೆ  – ಪ್ರತಿಭಾ ಪುರಸ್ಕಾರ
ಸಮಾರಂಭದಲ್ಲಿ 1ರಿಂದ ಪದವಿ ತರಗತಿಯವರೆಗಿನ 4,600 ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಲಾಲ ಸೈಂಟ್ ಮೆರೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಶ್ರುತ್‌ರನ್ನು ಅಭಿನಂದಿಸಲಾಯಿತು. ಅಳದಂಗಡಿ ಪ.ಪೂ.ಕಾಲೇಜಿನ ಪ್ರಯೋಗಾಲಯಕ್ಕೆ ರೂ.11ಸಾವಿರ, ಪಂಡಿಂಜೆ ವಾಳ್ಯ ಶಾಲೆಗೆ ಗೌರವ ಶಿಕ್ಷಕರ ವೇತನಕ್ಕೆ ರೂ.8ಸಾವಿರ, ಬಡಗಕಾರಂದೂರು ಶಾಲಾ ಶಿಕ್ಷಕರ ಗೌರವ ವೇತನಕ್ಕೆ ರೂ.20ಸಾವಿರ, ಅಳದಂಗಡಿ ಸರಕಾರಿ ಆಸ್ಪತ್ರೆಗೆ ಬೆಡ್ ಖರೀದಿಗೆ ರೂ.೫ಸಾವಿರ ವಿತರಿಸಲಾಯಿತು. ಮೋಹನ್‌ದಾಸ್ ಹಾಗೂ ವಿಜಯಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಅಳದಂಗಡಿ : ಶ್ರೀ ಸತ್ಯದೇವತೆ ದೈವಸ್ಥಾನ ಅಳದಂಗಡಿಯಲ್ಲಿ ದೈವಸ್ಥಾನಕ್ಕೆ ಬರುವ ಆದಾಯವನ್ನು ಪ್ರತಿ ವರ್ಷ ಅಳದಂಗಡಿ ಸೀಮೆ ವ್ಯಾಪ್ತಿಯ ಗ್ರಾಮಗಳ ಬಡಕುಟುಂಬದ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ನೀಡುವುದರ ಮೂಲಕ ಖರ್ಚು ಮಾಡಲಾಗುತ್ತಿದ್ದು, ಇದು ಜಿಲ್ಲೆಗೆ ಮಾದರಿಯಾಗಿದೆ.
ಪ್ರಥಮ ವರ್ಷ ನೂರು ಮಂದಿ ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಕಾರ್ಯಕ್ರಮ ಇಂದು 13ವರ್ಷಕ್ಕೆ ತಲುಪಿದ್ದು, ಈ ವರ್ಷ4600 ಮಂದಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸುವ ವಿನೂತನ ಪುಸ್ತಕ ವಿತರಣಾ ಕಾರ್ಯಕ್ರಮವು ಜೂ.12ರಂದು ಅಳದಂಗಡಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸರ್ವೋಚ್ಚ ನ್ಯಾಯಾಲ ಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಎನ್. ಸಂತೋಷ್ ಹೆಗ್ಡೆ ಅವರು ಮಾತನಾಡಿ, ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವ ಇಂದಿನ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ. ಅಧಿಕಾರ ಮತ್ತು ಶ್ರೀಮಂತಿಕೆ ಇರುವವರಿಗೆ ಸಿಗುವಷ್ಟು ಗೌರವ ಸಾಮಾನ್ಯರಿಗೆ ಸಿಗುವುದಿಲ್ಲ. ಸಮಾಜದಲ್ಲಿ ಮೌಲ್ಯಗಳ ಕುಸಿತ, ದುರಾಸೆ, ತೃಪ್ತಿ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಅದಕ್ಕಾಗಿ ಮಕ್ಕಳಿಗೆ ತೃಪ್ತಿ ಮತ್ತು ಮಾನವೀಯತೆಯನ್ನು ಪೋಷಕರು ಕಲಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಕರ್ನಾಟಕ ಲೋಕಾಯುಕ್ತದಂತಹ ಉತ್ತಮ ಸಂಸ್ಥೆ ಬೇರೊಂದಿಲ್ಲ. ತಾನು ಲೋಕಾಯುಕ್ತನಾಗಿದ್ದಾಗ ಅನ್ಯಾಯದ ವಿರುದ್ಧ ಜನರಿಗೆ ಸಹಾಯ ಮಾಡುವ ಅವಕಾಶ ದೊರಕಿತ್ತು. ತಾನು ಲೋಕಾಯುಕ್ತನಾಗಿದ್ದಾಗ ೨೩ಸಾವಿರ ದೂರು ಅರ್ಜಿಗಳು ಬಂದಿದ್ದು, ಗಣಿ ಹಗರಣದ ತನಿಖೆ ನಡೆಸುವಾಗ 3 ಮುಖ್ಯ ಮಂತ್ರಿಗಳು, 9  ಮಂತ್ರಿಗಳು, 790  ಅಧಿಕಾರಿಗಳ ವಿರುದ್ಧ ವರದಿ ಮಾಡಿದ್ದೆ. ಕಬ್ಬಿಣದ ಅದಿರನ್ನು ಸರಕಾರಕ್ಕೆ ರೂ. 27 ರಾಜಧನ ಪಾವತಿಸಿ ರೂ.7 ಸಾವಿರಕ್ಕೆ ಮಾರಾಟ ಮಾಡಿ ಸರಕಾರಕ್ಕೆ ವಂಚನೆ ಮಾಡಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿತ್ತು ಎಂದು ತಿಳಿಸಿದರು. ಭ್ರಷ್ಟಾಚಾರಿಗಳಿಗೆ ಜೀವನದಲ್ಲಿ ತೃಪ್ತಿ ಎಂಬುದೇ ಇರುವುದಿಲ್ಲ, ದುರಾಸೆಗೆ ಯಾವುದೇ ಮದ್ದಿಲ್ಲ, ಇದನ್ನು ದೂರ ಮಾಡುವ ಕೆಲಸಗಳಾಗಬೇಕು, ಕಾನೂನು ಚೌಕಟ್ಟಿನಲ್ಲಿ ಮಾಡಿದ ಶ್ರೀಮಂತಿಕೆ ತಪ್ಪಲ್ಲ, ಆದರೆ ಇನ್ನೊಬ್ಬರನ್ನು ಲೂಟಿ ಮಾಡಿ, ಸರಕಾರಕ್ಕೆ ವಂಚಿಸಿ ಕೆಲವೇ ಮಂದಿ ದೊಡ್ಡ ಮಟ್ಟದಲ್ಲಿ ತಿಂದು ಹಾಕುವುದನ್ನು ತಡೆಯಬೇಕು. ಈ ಸಮಾಜವನ್ನು ಬದಲಾಯಿಸಬೇಕು, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಎಲ್ಲರ ಸಂಕಲ್ಪವಾಗಬೇಕು. ಇದು ಇಂದಿನ ಮಕ್ಕಳಿಂದ ಆರಂಭವಾಗಬೇಕು ಎಂದು ಕರೆ ನೀಡಿದರು.
ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಶಾಸಕ ಕೆ. ವಸಂತ ಬಂಗೇರ ಅವರು ಮಾತನಾಡಿ, ಅಳದಂಗಡಿಯ ಪುಟ್ಟ ಗ್ರಾಮದಲ್ಲಿ ಇಂದು ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ. ದೈವಸ್ಥಾನದ ಆದಾಯವನ್ನು ಶಿಕ್ಷಣಕ್ಕೆ ವಿನಿಯೋಗಿಸುವುದು ಇದೊಂದು ಆದರ್ಶ ಕಾರ್ಯಕ್ರಮವಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಎಲ್ಲರ ಕಾರ್ಯಕ್ರಮ ವಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ಅವರು ಮಾತನಾಡಿ ಜೈನ ಧರ್ಮದಲ್ಲಿ ಅಪರಿಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಅಪರಿಗ್ರಹ ಎಂದರೆ ತೃಪ್ತಿ ಎಂದರ್ಥ, ಮನುಷ್ಯನಿಗೆ ಜೀವನದಲ್ಲಿ ತೃಪ್ತಿ ಅಗತ್ಯ ಎಂದರು. ಮಕ್ಕಳು ಸತತ ಶ್ರಮ ಛಲದಿಂದ  ಉತ್ತಮ  ಶಿಕ್ಷಣವನ್ನು ಪಡೆದು ಊರಿಗೆ ಕೀರ್ತಿ ತಂದಾಗ ಇಂತಹ ಕಾರ್ಯಕ್ರಮ ಹೆಚ್ಚು ಮಹತ್ವವನ್ನು ಪಡೆಯುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಳದಂಗಡಿ ಅರಮನೆಯ ಶ್ರೀಮತಿ ಸರಸ್ವತಿ ಅಮ್ಮ, ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ತಾ.ಪಂ. ಸದಸ್ಯರಾದ ವಿನಿಷಾ ಪ್ರಕಾಶ್, ಸುಧೀರ್ ಆರ್. ಸುವರ್ಣ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರ್ ಉಪಸ್ಥಿತರಿದ್ದರು. ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲ ಸ್ವಾಗತಿಸಿದರು. ನಿತ್ಯಾನಂದ ಶೆಟ್ಟಿ ನೊಚ್ಚ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿ, ಸದಾನಂದ ಪೂಜಾರಿ ಉಂಗಿಲಬೈಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.