ಶ್ರೇಷ್ಟ ಅಥ್ಲೀಟ್ ಆಗಲು ಕೊಹ್ಲಿ ಬಯಕೆ

Advt_NewsUnder_1
Advt_NewsUnder_1
Advt_NewsUnder_1

ವಿರಾಟ್ ಕೊಹ್ಲಿ ಉತ್ತಮ ದೇಹದಾರ್ಢ್ಯತೆ ಹೊಂದಿರುವ ಭಾರತದ ಕ್ರಿಕೆಟರ್ ಆಗಿದ್ದು, ಚಾಂಪಿಯನ್ ಬ್ಯಾಟ್ಸ್‌ಮನ್‌ಗೆ ಅಷ್ಟರಲ್ಲಿ ಮಾತ್ರ ತೃಪ್ತಿ ಹೊಂದಿಲ್ಲ. ತಾವು ಜಗತ್ತಿನಲ್ಲೇ ಶ್ರೇಷ್ಟ ಅಥ್ಲೀಟ್ ಆಗಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ ಎಂದು ಭಾರತ ಮತ್ತು ಆರ್‌ಸಿಬಿ ಫಿಟ್ನೆಸ್ ಕೋಚ್ ಶಂಕರ್ ಬಸು ಬಹಿರಂಗ ಮಾಡಿದ್ದಾರೆ. ಕೊಹ್ಲಿ ತಮ್ಮ ಫಿಟ್ನೆಸ್ ಕುರಿತು ವಿಪುಲವಾಗಿ ಕೆಲಸ ಮಾಡುತ್ತಿದ್ದು, ವಿಶೇಷವಾಗಿ ತಮ್ಮ ಬಲ ಹೆಚ್ಚಿಸಿಕೊಳ್ಳುವ ಕಡೆ ಗಮನಹರಿಸಿದ್ದಾರೆ. ಇದರ ಫಲವು ಪಂದ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರೀಗ ಬೌಂಡರಿ ಬಾರಿಸುವಷ್ಟೇ ಸುಲಭವಾಗಿ ಸಿಕ್ಸರುಗಳನ್ನು ಹೊಡೆಯಬಲ್ಲರು. ವಿರಾಟ್ ಜಗತ್ತಿನಲ್ಲೇ ಶ್ರೇಷ್ಟ ಅಥ್ಲೀಟ್ ಆಗಲು ಬಯಸಿದ್ದು, ಅದಕ್ಕೆ ಆಕಾಶವೇ ಮಿತಿಯಾಗಿದೆ. ಅಥ್ಲೆಟಿಕ್ ಸಾಮರ್ಥ್ಯವಿರುವ ಅನೇಕ ಆದರ್ಶ ಕ್ರೀಡಾಪಟುಗಳು ಅವರಿಗಿಂತ ಮುಂದಿದ್ದು, ಈ ಪೈಪೋಟಿಯಿಂದ ಹಿಂದುಳಿಯಲು ಅವರು ಬಯಸುವುದಿಲ್ಲ ಎಂದು ಬಸು ಬಣ್ಣಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.