ಒಲಿಂಪಿಕ್ಸ್ ಸನಿಹಕ್ಕೆ ರಿಲೇ ತಂಡ

 

ಭಾರತೀಯ 4/400 ಮೀಟರ್ ರಿಲೇ ತಂಡ ಭರ್ಜರಿ ಫಾರ್ಮನಲ್ಲಿ ಮುನ್ನಡೆದಿದೆ. ಕನ್ನಡತಿಯರಾದ ಎಂಆರ್ ಪೂವಮ್ಮ ಮತ್ತು ಅಶ್ವಿನಿ ಅಕ್ಕುಂಜಿ ಒಳಗೊಂಡ ಮಹಿಳೆಯರ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ೧೨ನೇ ಸ್ಥಾನಕ್ಕೇರುವ ಮೂಲಕ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಸನಿಹದಲ್ಲಿದ್ದರೆ, ಪುರುಷರ ತಂಡ ೧೮ ವರ್ಷ ಹಿಂದಿನ ರಾಷ್ಟ್ರೀಯ ದಾಖಲೆ ಅಳಿಸಿ ಹಾಕುವ ಮೂಲಕ ಒಲಿಂಪಿಕ್ಸ್ ಆಸೆ ಜೀವಂತವಾಗಿಟ್ಟುಕೊಂಡಿದೆ. ಅಂತಾರಾಷ್ಟ್ರೀಯ ಸ್ಪ್ರಿಂಟ್ ಆಂಡ್ ರಿಲೇ ಟೀಮ್ಸ್ ಕಪ್‌ನಲ್ಲಿ ಏಷ್ಯಾಡ್ ಚಾಂಪಿಯನ್ ಮಹಿಳೆಯರ ೪/೪೦೦ ಮಿ. ರಿಲೇ ತಂಡ ೩ ನಿಮಿಷ ೩೦.೧೬ ಸೆಕೆಂಡುಗಳಲಿ ಸ್ಪರ್ಧೆ ಮುಗಿಸಿ ಸ್ವರ್ಣ ಪದಕ ಗೆದ್ದುಕೊಂಡಿತು. ಇದರಿಂದ ರ‍್ಯಾಂಕಿಂಗ್‌ನಲ್ಲಿ ಭಾರತ ೧೬ರಿಂದ ೧೨ನೇ ಸ್ಥಾನಕ್ಕೇರಿದೆ. ಐಎಎಎಫ್ ನಿಯಮ ಪ್ರಕಾರ ಅಗ್ರ ೧೬ ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದರಿಂದ ಭಾರತಕ್ಕೆ ಅವಕಾಶ ಹೆಚ್ಚಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.