ಅಂತಾರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ

ಭಾರತೀಯ ಮೂಲದ ಅಮೆರಿಕನ್ ಪ್ರಜೆ ಲೇಖಕ ಅಖಿಲ್ ಶರ್ಮಾ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಡಬ್ಲಿನ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಜತೆ ೧ ಲಕ್ಷ ಯುರೋ(೭೫ ಲಕ್ಷ ರೂಪಾಯಿ) ಬಹುಮಾನ ಕೂಡಾ ಅವರ ಕಾದಂಬರಿ, ಫ್ಯಾಮಿಲಿ ಲೈಫ್ ಎಂಬ ಆತ್ಮಚರಿತ್ರೆಗೆ ದೊರಕಿದೆ. ಪ್ರಶಸ್ತಿಗಾಗಿ ೪೩ ದೇಶಗಳ ೧೫೦ಕ್ಕೂ ಅಧಿಕ ಲೇಖಕರು ಸ್ಪರ್ಧಿಸಿದ್ದರು. ಇದು ಲೇಖನಗಳಿಗೆ ಜಗತ್ತಿನಲ್ಲೆ ಅತ್ಯಂತ ಹೆಚ್ಚು ಪ್ರಶಸ್ತಿ ಮೊತ್ತ ಕೊಡಮಾಡುವ ಪ್ರಶಸ್ತಿಯಾಗಿದೆ. ಪ್ರಶಸ್ತಿ ಲಭಿಸಿದ್ದಕ್ಕೆ ಖುಷಿಯಾಗಿರುವ ಲೇಖಕ ಶರ್ಮಾ, ಜನರ ತೀರ್ಪಿಗೆ ನಾನು ಋಣಿಯಾಗಿದ್ದು, ಅವರ ತೀರ್ಪಿಗೆ ತಲೆಬಾಗುವೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.