ಎಸ್‌ಸಿಡಿಸಿಸಿ ಬ್ಯಾಂಕ್ ಸ್ಥಳಾಂತರ

sthalanthara 1

sthalanthara

ಉಜಿರೆ : ಜೂ.11 ರಂದು ಉಜಿರೆ ಮಾವಂತೂರು ರೆಸಿಡೆನ್ಸಿ ಕಟ್ಟಡದಲ್ಲಿ ಸ್ಥಳಾಂತರಿತ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಾಖೆಯು ಸ್ಥಳಾಂತರಗೊಂಡು ಉದ್ಘಾಟನೆಗೊಂಡಿತು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಶಾಖೆಯನ್ನು ಉದ್ಘಾಟಿಸಿದರು.
ಮಾಸ್ ಸಂಸ್ಥೆ ಅದ್ಯಕ್ಷ ಶ್ರೀಧರ ಜಿ ಭಿಡೆ, ಉಜಿರೆ ಸಹಕಾರಿ ಸಂಘ ಅಧ್ಯಕ್ಷ ಇಚ್ಚಿಲ ಸುಂದರ ಗೌಡ, ಕಳಿಯ ಸಹಕಾರಿ ಸಂಘ ಅಧ್ಯಕ್ಷ ವಸಂತ ಮಜಲು, ಮುಂಡಾಜೆ ಸಹಕಾರಿ ಸಂಘದ ಅಧ್ಯಕ್ಷ ಎನ್.ಎಸ್ ಗೋಖಲೆ, ಪಡಂಗಡಿ ಸಹಕಾರಿ ಸಂಘದ ಅಧ್ಯಕ್ಷ ಕೆ. ಎಸ್ ಯೋಗೀಶ್ ಕುಮಾರ್, ಬಂಗಾಡಿ ಸಹಕಾರಿ ಸಂಘದ ಅಧ್ಯಕ್ಷ ಎನ್ ಲಕ್ಷ್ಮಣ ಗೌಡ, ಧರ್ಮಸ್ಥಳ ಸಹಕಾರಿ ಸಂಘದ ಅಧ್ಯಕ್ಷ ರಘುಚಂದ್ರ ರಾವ್, ಜಿ.ಪಂ ಸದಸ್ಯೆ ನಮಿತಾ, ಕಟ್ಟಡದ ಮಾಲಕ ಪದ್ಮರಾಜ್ ಬಲ್ಲಾಳ್, ತಾಲೂಕಿನ ವಿವಿಧ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನವೋದಯ ಸ್ವ ಸಹಾಯ ಸಂಘಗಳ ಮೇಲ್ವಿಚಾರಕರುಗಳು, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಲ್ಕೇರಿಮೊಗ್ರು ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಪಿ.ಎಚ್ ನಿತ್ಯಾನಂದ ಶೆಟ್ಟಿ ನಿರ್ವಹಿಸಿ. ಉಜಿರೆ ಶಾಖಾ ವ್ಯವಸ್ಥಾಪಕಿ ಮಾಲಾ.ಎಂ.ಕೆ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.