ಉಜಿರೆ ದಮಾಸ್ ಗೋಲ್ಡ್ ಅಂಗಡಿಯಲ್ಲಿ ಕಳ್ಳತನ ಯತ್ನ

damas 1 copy

damas 2

damas

  ಉಜಿರೆ ವಿಶ್ವಾಸ್ ಸಿಟಿ ಬಿಲ್ಡಿಂಗ್‌ನಲ್ಲಿರುವ ದಮಾಸ್ ಗೋಲ್ಡ್ ಚಿನ್ನದ ಅಂಗಡಿಗೆ ನಿನ್ನೆ ರಾತ್ರಿ ಕಳ್ಳರು ಲಗ್ಗೆ ಇಟ್ಟಿದ್ದಾರೆ. ಸುಮಾರು ಒಂದು ಗಂಟೆಯ ರಾತ್ರಿಯ ಅಂದಾಜು ನಾಲ್ಕು ಮಂದಿಯ ತಂಡ ಅಂಗಡಿಯ ಮುಂಭಾಗದ ಶಟರನ್ನು ಮುರಿದು, ಮುಂದಿನ ಗಾಜನ್ನು ಪುಡಿ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಒಳಗೆ ಚಿನ್ನದ ಲಾಕರನ್ನು ಕೂಡ ಒಡೆಯುವ ಪ್ರಯತ್ನವನ್ನು ಮಾಡಲಾಗಿದೆ. ಬಳಿಕ ಯಾವುದೇ ಸ್ವತ್ತುಗಳನ್ನು ಕಳವು ಮಾಡಲು ಸಾಧ್ಯವಾಗಲಿಲ್ಲ ಹಾಗೆ ಮರಳಿದ್ದಾರೆ. ಮುಂಜಾನೆ ೩.೩೦ ರ ಅಂದಾಜಿಗೆ ಘಟನೆ ತಿಳಿದಿದೆ. ಸ್ಥಳಕ್ಕೆ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಭಾಸ್ಕರ್ ರೈ, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನೇಮಿರಾಜು, ಎಸ್.ಐ ಸಂದೇಶ್ ಡಿ.ಬಿ ಮತ್ತು ತಂಡದವರು ಬಂದು ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಪೂರ್ಣವಾಗಿ ಚಿತ್ರೀಕರಣಗೊಂಡಿದೆ. ಪೋಲೀಸರು ತನಿಖೆ ಪ್ರಾರಂಭಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.