HomePage_Banner_
HomePage_Banner_
HomePage_Banner_

ಛಾಯಾ ಭವನ ಲಕ್ಕೀ ಕೂಪನ್ ಡ್ರಾ

Advt_NewsUnder_1

12ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಎಸೋಸಿಯೇಶನ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಛಾಯಾ ಭವನ’ಇದರ ಸಹಾಯರ್ಥ ಏರ್ಪಡಿಸಲಾದ ಲಕ್ಕೀಡಿಪ್ ಡ್ರಾ ಕಾರ್ಯಕ್ರಮವು ಜೂ.5 ರಂದು ಚರ್ಚ್ ರಸ್ತೆ ವಿಲ್ಸ್ ಸ್ಟುಡಿಯೋದಲ್ಲಿ ನಡೆಯಿತು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಕುಲಾಲ್, ಬೆಳ್ತಂಗಡಿ ಮಯೂರ ಟೆಕ್ಸ್‌ಟೈಲ್ಸ್ ಮಾಲಕ ಲ| ಪದ್ಮನಾಭ, ಗುತ್ತಿಗೆದಾರ ಹಾಜಿ ಅಬ್ದುಲ್ ರಹಿಮಾನ್ ಲಕ್ಕೀ ಕೂಪನ್ ಡ್ರಾ ನೆರವೇರಿಸಿದರು. ಈ ಸಂದರ್ಭದಲ್ಲಿ ಎಸೋಸಿಯೇಶನ್ ಅಧ್ಯಕ್ಷ ಮೌರೀಸ್ ಫೆರ್ನಾಂಡೀಸ್, ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ, ಕಟ್ಟಡ ಸಮಿತಿ ಅಧ್ಯಕ್ಷ ಸುಂದರ್, ಸಮಿತಿ ಪದಾಧಿಕಾರಿಗಳಾದ ಗೋಪಾಲ್, ಉಮೇಶ್, ಮನುಮದ್ದಡ್ಕ, ವಸಂತ್, ದಾಮು ಜಿ.ಕೆರೆ, ಗಣೇಶ್ ವೇಣೂರು, ಮಹಾವೀರ ಜೈನ್, ಮೊದಲಾದವರು ಉಪಸ್ಥಿತರಿದ್ದರು. ಎಸೋಸಿಯೇಶನ್‌ನ ಗೌರವಾಧ್ಯಕ್ಷ ಪಾಲಾಕ್ಷ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.