HomePage_Banner_
HomePage_Banner_
HomePage_Banner_

ತಹಶಿಲ್ದಾರ್ ವಾಹನ ದುರ್ಬಳಕೆ ಆರೋಪ ಚಾಲಕ ರಾಜೇಶ್ ಅಮಾನತಿಗೆ ಪುತ್ತೂರು ಎ. ಸಿ ಸೂಚನೆ

Advt_NewsUnder_1

driver 1

driver 3

driver

ಬೆಳ್ತಂಗಡಿ: ತಾಲೂಕು ದಂಡಾಧಿಕಾರಿಗಳೂ ಆಗಿರುವ ತಹಶಿಲ್ದಾರ್ ಅವರ ಹೆಸರಿನ ಸರಕಾರಿ ವಾಹನ ದುರ್ಬಳಕೆ ಮಾಡಿಕೊಂಡು ರಾತ್ರಿ ವೇಳೆ ಮರಳು ಮತ್ತು ಇತರ ಸಾಗಾಟದ ಲಾರಿಗಳನ್ನು ನಿಲ್ಲಿಸಿ ಅವರಿಂದ ದಂಡದ ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಅಕ್ರಮದಲ್ಲಿ ಪೊಲೀಸ್ ಅತಿಥಿಯಾಗಿದ್ದ ಚಾಲಕ ನಾವೂರು ನಿವಾಸಿ ರಾಜೇಶ್ (34ವ.) ಅವರನ್ನು ಕರ್ತವ್ಯಕ್ಕೆ ರಜೆ ಹಾಕುವಂತೆ ಘಟನಾ ದಿನದಿಂದಲೇ ಸೂಚಿಸಲಾಗಿದ್ದು ಇದೀಗ ಇಲಾಖಾ ತನಿಖೆಗೆ ಪೂರಕವಾಗಿ ಕರ್ತವ್ಯದಿಂದ ಅಮಾನತುಗೊಳಿಸುವಂತೆ ಪುತ್ತೂರು ಎ. ಸಿ ಡಾ| ರಾಜೇಂದ್ರ ಆದೇಶಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿಲ್ಲವಾದರೂ ರಾಜೇಶ್ ಅವರು ಎಸಗಿದ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಮೇಲಧಿಕಾರಿಯಾಗಿರುವ ಎಸಿ ಅವರು ಈ ಕ್ರಮ ಕೈಗೊಂಡಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.