ಕಿರಿಯಾಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ujire kiriyadi vanamahosava copy ಉಜಿರೆ : ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಲಕ್ಷವೃಕ್ಷ ಸಮಿತಿ ಗುರುವಾಯನಕೆರೆ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಕಿರಿಯಾಡಿ ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಜೂ.5 ರಂದು ಆಚರಿಸಲಾಯಿತು.
ಕಿರಿಯಾಡಿ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಕಡಿದ ಮರಗಳ ಹತ್ತು ಪಟ್ಟು ಹೆಚ್ಚು ಗಿಡಗಳನ್ನು ನೆಡುವ ಸಂಕಲ್ಪದಂತೆ ಲಕ್ಷ ವೃಕ್ಷ ಸಮಿತಿಯವರು ನೀಡಿರುವ ಉತ್ತಮ ಜಾತಿಯ ಗಿಡಗಳನ್ನು ನೆಡಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಂದರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಕ್ಷ ವೃಕ್ಷ ಸಮಿತಿಯ ಸಂಚಾಲಕ ಕಾಶೀನಾಥ್ ಮತ್ತು ಶ್ರೀಕಾಂತ್ ಭಾಗವಹಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ಭಗೀರಥ ಪ್ರಾರ್ಥನೆ ಬಳಿಕ ಆಡಳಿತ ಮೊಕ್ತೇಸರ ಉದಯ ಕುಮಾರ್ ಸಂಪಿಗೆತ್ತಾಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ಕೆ.ವಿ ಹೊಳ್ಳ ವಂದಿಸಿದರು. ಕಾರ್ಯದರ್ಶಿ ಧರ್ಣಪ್ಪ ಗೌಡ ಧರಣಿ ಕಾರ್ಯಕ್ರಮ ನಿರೂಪಿಸಿದರು.
ಗಂಗಾಧರ ರಾವ್ ಕೆವುಡೇಲು, ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಜೀವ ಹೆಗ್ಡೆ, ಕೊರಗಪ್ಪ ಗೌಡ, ಉತ್ಸವ ಸಮಿತಿಯ ಉಪಾಧ್ಯಕ್ಷ ಸೀತಾರಾಮ ಕೂಡಿಗೆ, ಭಜನಾ ಮಂಡಳಿಯ ಉಪಾಧ್ಯಕ್ಷ ಕೃಷ್ಣಪ್ರಸಾದ್, ಕಾರ್ಯದರ್ಶಿ ಶೈಲೇಶ್ ಕೆ. ಧರಣಿ, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಚೀಂಕ್ರ ಗೌಡ ಮತ್ತು ಅಪ್ಪು ನಾಯರ್ ಗಿಡ ನೆಡುವ ಮೂಲಕ ಸಸಿಗಳ ಪಾಲನೆಯನ್ನು ಅವರಿಗೆ ವಹಿಸಿಕೊಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.