ಜಿ.ಪಂ., ತಾ.ಪಂ. ಸದಸ್ಯರಿಗೆ ಅಭಿನಂದನೆ

Advt_NewsUnder_1
Advt_NewsUnder_1
Advt_NewsUnder_1

kokkada jp tp sadasyarige sanmana copyಕೊಕ್ಕಡ : ಕಳೆದ ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳಲ್ಲಿ ಧರ್ಮಸ್ಥಳ ಜಿ.ಪಂ. ಮತ್ತು ಅರಸಿನಮಕ್ಕಿ ತಾ.ಪಂ. ವಿಜೇತ ಅಭ್ಯರ್ಥಿಗಳನ್ನು ಹತ್ಯಡ್ಕ ಗ್ರಾಮದ ತುಂಬೆತ್ತಡ್ಕ ರಾಣೆಯರ್ ಸಮಾಜ ಮತ್ತು ಇದೇ ಸಮಾಜದ ನವಶಕ್ತಿ ಯುವಕ ಮಂಡಲದ ವತಿಯಿಂದ ಇತ್ತೀಚೆಗೆ ಗೌರವಿಸಿ ಅಭಿನಂದಿಸಲಾಯಿತು.
ಧರ್ಮಸ್ಥಳ ಜಿ.ಪಂ. ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದ ಕೊರಗಪ್ಪ ನಾಯ್ಕ್ ಮತ್ತು ಅರಸಿನಮಕ್ಕಿ ತಾ.ಪಂ. ಕ್ಷೇತ್ರದಿಂದ ವಿಜಯಿಯಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿಯೂ ಆಯ್ಕೆಯಾದ ದಿವ್ಯಜ್ಯೋತಿ ಗೋವಿಂದ ಬರ್ಗುಳ ಇವರನ್ನು ಗೌರವಿಸಲಾಯಿತು. ಕೊರಗಪ್ಪ ನಾಯ್ಕ್ ಅಭಿನಂದನೆ ಸ್ವೀಕರಿಸಿ ಮಾತನಾಡಿ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಕೊಕ್ಕಡದಲ್ಲಿ ತನ್ನ ಕಛೇರಿಯನ್ನು ತೆರೆದಿದ್ದು ಸಂಪರ್ಕಿಸುವಂತೆ ಕೋರಿದರು. ಮುದ್ದಿಗೆ- ಅರಸಿನಮಕ್ಕಿ ರಸ್ತೆಯಲ್ಲಿ ಮೋರಿ ಅಳವಡಿಸುವುದು ಮುಂತಾದ ಅತ್ಯಾವಶ್ಯಕತೆಗಳಿಗೆ ತನ್ನಿಂದ ಸಾಧ್ಯವಾದ ಮಟ್ಟಿಗೆ ಸ್ಪಂದಿಸುವ ಭರವಸೆ ನೀಡಿದರು. ತಾ.ಪಂ. ಅಧ್ಯಕ್ಷೆಯಾಗಿ ಆಯ್ಕೆಯಾದ ದಿವ್ಯಜ್ಯೋತಿ ಗೋವಿಂದ ಬರ್ಗುಳ ಮಾತನಾಡಿ ತಾನು ಹುಟ್ಟಿ ಬೆಳೆದ ಊರು ಇದಾಗಿದ್ದು ತನಗೆ ಲಭಿಸಿದ ಈ ಸದಾವಕಾಶದಲ್ಲಿ ಉತ್ತಮ ಸೇವೆಯನ್ನು ನೀಡಲು ತಾನು ಬದ್ದಳೆಂದು ನುಡಿದರು, ಅಲ್ಲದೆ ತಮ್ಮ ಸಮಾಜದ ಮುಖಂಡರುಗಳು ಮತ್ತು ಸರ್ವ ಸದಸ್ಯರು ತಮ್ಮನ್ನು ಗುರುತಿಸುವ ಕಾರ್ಯ ಕೈಗೊಂಡಿದ್ದಕ್ಕೆ ಧನ್ಯತೆಯನ್ನು ತಿಳಿಸಿದರು. ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಬಿ. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಂಬೆತ್ತಡ್ಕ ದ ಶ್ರೀ ಕಾಳಭೈರವ ಸ್ವಾಮಿ ಮತ್ತು ಶ್ರೀ ಅಮ್ಮನವರ ಮಾರಿಗುಡಿ ತುಂಬೆತ್ತಡ್ಕ ಇದರ ಆಡಳಿತ ಮೊಕ್ತೇಸರ ರವೀಂದ್ರ ಹೆಚ್., ಮಂಗಳೂರು ಯೇನಪೋಯಾ ಆಸ್ಪತ್ರೆಯ ಸಮಾಜ ಸೇವಾ ಕಾರ್ಯಕರ್ತ ಶಿವಪ್ರಸಾದ್ ಉಪಸ್ಥಿತರಿದ್ದರು.
ನವಶಕ್ತಿ ಯುವಕ ಮಂಡಲದ ಸದಸ್ಯ ಜಯಾನಂದ ಸ್ವಾಗತಿಸಿದರು. ತಾಲೂಕು ಶಿಕ್ಷಣ ಸಂಪನ್ಮೂಲ ವ್ಯಕ್ತಿ ರಾಜಾರಾಮ್ ಟಿ. ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.