ಅಳದಂಗಡಿ: ಯೋಗ ತರಬೇತಿ ಶಿಬಿರ

aladangady yoga tarabeti udhgatane copy ಅಳದಂಗಡಿ: ಇಲ್ಲಿನ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಯೋಗ ತರಬೇತಿ ಶಿಬಿರ ಜೂ 5 ರಂದು ನಡೆಯಿತು. ತರಬೇತಿಯ ಉದ್ಘಾಟನೆಯನ್ನು ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳ್ತೇದಾರರಾದ ಶಿವಪ್ರಸಾದ್ ಅಜಿಲರು ನೆರವೇರಿಸಿದರು. ಅಳದಂಗಡಿ ಗ್ರಾಮ ಪಂಚಾಯತಿನ ಆಧ್ಯಕ್ಷರಾದ ಸತೀಶ್ ಕುಮಾರ್ ಮಿತ್ತಮಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಡಿಂಜೆ ತಾ.ಪಂ.ಸದಸ್ಯ ಸುಧೀರ್ ಸುವರ್ಣ,ಅಳದಂಗಡಿ ಪ್ರಾ.ಕೃಷಿ ಪತ್ತಿನ ಸುಭಾಶ್ಚಂದ್ರ ರೈ ಪಡ್ಯೋಡಿ ಗುತ್ತು, ಗ್ರಾ.ಪಂ.ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು, ಡಾ.ಸುಷ್ಮಾ ಡೋಂಗ್ರೆ ಅಳದಂಗಡಿ, ಮೆಸ್ಕಾಂ ಇಲಾಖೆಯ ಶಿವಶಂಕರ್, ಆರೋಗ್ಯ ಕೇಂದ್ರದ ಚಂದ್ರಶೇಖರ ಸುರ್ಲೋಡಿ . ಮೋಹನ ಆಚಾರ್ಯ ಬೆಳ್ತಂಗಡಿ, ಯೋಗ ತರಬೇತಿಯ  ಶಿಕ್ಷಕರಾಗಿರುವ ಮಹೇಶ್ ಪತ್ತಾರ್ ಉಪಸ್ಥಿತರಿದ್ದರು. ತರಬೇತಿಯ ಆಯೋಜನೆಯನ್ನು ರಮೇಶ್ ಆಚಾರ್ಯ ಬಳಂಜ ಮತ್ತು ಶ್ರೀನಿವಾಸ ಆಚಾರ್ಯ ಅಳದಂಗಡಿ ಮಾಡಿದ್ದರು. ಗ್ರಾ.ಪಂ ಮಾಜಿ ಅಧ್ಯಕ್ಷೆ ಹರಿಣಾಕ್ಷಿ ಶೆಟ್ಟಿ, ಗ್ರಾ.ಪಂ ಮಾಜಿ ಉಪಾಧ್ಕಕ್ಷ ಸುಂದರ ಆಚಾರ್ಯ, ಮಾಜಿ ಸದಸ್ಯ ಕೊರಗಪ್ಪ , ಶಿಕ್ಷಕರಾದ ಜಗದೀಶ, ಸುಬ್ರಹ್ಮಣ್ಯ ಭಟ್ ಪಿಲ್ಯ, ಸುಪ್ರೀತ್ ಜೈನ್ ಅಳದಂಗಡಿ, ಎ.ಶಶಿಧರ ಅಳದಂಗಡಿ, ಪಿ.ಕೆ.ದಿನೇಶ್ ಬಳಂಜ, ಆನಂದ ಆಚಾರ್ಯ, ಉಪಸ್ಥಿತರಿದ್ದರು. ಆಮಂತ್ರಣ ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಜೈನ್ ಕಾರ‍್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.