ಪ್ರಮುಖ ಅಗ್ನಿಶಾಮಕರಾಗಿದ್ದ ವಸಂತ ಗೌಡ ಅವರಿಗೆ ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಗೊಂಡು ವರ್ಗಾವಣೆ

vasantha gawda copy ಬೆಳ್ತಂಗಡಿ : ಇಲ್ಲಿನ ಅಗ್ನಿಶಾಮಕ ಠಾಣೆಯಲ್ಲಿ ಪ್ರಮುಖ ಅಗ್ನಿ ಶಾಮಕರಾಗಿದ್ದ ವಸಂತ ಗೌಡ ಅವರು ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಗೊಂಡು ಮಂಗಳೂರಿನ ಪಾಂಡೇಶ್ವರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಮಿತ್ತಬಾಗಿಲು ಗ್ರಾಮದ ದಿಡುಪೆ ಶೆಟ್ಟಿಹಿತ್ಲು ಡೀಕಯ್ಯ ಗೌಡ ಅವರ ಪುತ್ರರಾಗಿರುವ ವಸಂತ ಗೌಡ ಅವರು 1988 ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಸೇರಿ ಬೆಂಗಳೂರಿನಲ್ಲಿ ತರಭೇತಿ ಮುಗಿಸಿ ಮಂಗಳೂರಿನ ಪಾಂಡೇಶ್ವರ ಠಾಣೆಗೆ ನಿಯೋಜಿತರಾಗಿದ್ದರು. ಬಳಿಕ 1997 ರಲ್ಲಿ ಪ್ರಮುಖ ಅಗ್ನಿ ಶಾಮಕರಾಗಿ ಪದೋನ್ನತಿಗೊಂಡು ಉಡುಪಿಗೆ ವರ್ಗಾವಣೆಯಾಗಿ ಬಳಿಕ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ದಕ್ಷತೆ ಮತ್ತು ಉತ್ತಮ ಸೇವೆಗಾಗಿ 2013-14 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕವನ್ನೂ ಪಡೆದಿರುವ ಅವರು 27 ಬಾರಿ ಇಲಾಖೆಯಿಂದ ನಗದು ಪುರಸ್ಕಾರಕ್ಕೊಳಗಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.