ಧಾರ್ಮಿಕ ವಿದ್ವಾಂಸರ ನೇತೃತ್ವ, ಸಾಮಾಜಿಕ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ನಡೆದರೆ ಸೌಹಾರ್ದತೆ: ಯು.ಟಿ. ಖಾದರ್

ramzan kitt vitharane copyಮಲ್‌ಜಅ ಸಂಸ್ಥೆಯಿಂದ 1200 ಕುಟುಂಬಗಳಿಗೆ ರಂಝಾನ್ ಸ್ಪೆಷಲ್ ಕಿಟ್ ವಿತರಣೆ

ಬೆಳ್ತಂಗಡಿ : ಧಾರ್ಮಿಕ ವಿದ್ವಾಂಸರುಗಳ ನೇತೃತ್ವವನ್ನು ಅಂಗೀಕರಿಸಿ ಅವರ ಆಶೀರ್ವಾದದೊಂದಿಗೆ ಸಾಮಾಜಿಕ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ನಡೆದರೆ ಈ ನಾಡಿನಲ್ಲಿ ಸೌಹಾರ್ದತೆ, ಸಹಾಯ ಮನೋಭಾವ, ಸಹಿಷ್ಣುತೆಗೆ ಬರಲು ಸಾಧ್ಯ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಜೂ. 5 ರಂದು ಉಜಿರೆ ಮಲ್‌ಜಅ ಕ್ಯಾಂಪಸ್‌ನಲ್ಲಿ, ಅಶಕ್ತರ, ದೀನ ದುರ್ಬಲರ ಆಶಾಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಮಲ್‌ಜಅ ಸಂಸ್ಥೆಯ ವತಿಯಿಂದ ಮಾಸಿಕವಾಗಿ ಅಕ್ಕಿ ಪಡೆಯುತ್ತಿರುವ ತಾಲೂಕಿನ ಆಯ್ದ 750 ಕುಟುಂಬಗಳಿಗೂ ಸೇರಿದಂತೆ ಜಿಲ್ಲೆಯಿಂದ ಆಯ್ದ 1,200 ಕುಟುಂಬಗಳಿಗೆ ತಲಾ ಮೂರು ಸಾವಿರಕ್ಕೂ ಮಿಕ್ಕಿ ಬೆಲೆಬಾಳುವ ಆಹಾರ ಸಾಮಾಗ್ರಿಗಳನ್ನೊಳಗೊಂಡ ರಂಝಾನ್ ಸ್ಪೆಷಲ್ ಕಿಟ್ಟ್ ವಿತರಣೆ ನಡೆಸಿ ಅವರು ಮಾತನಾಡಿದರು. ಸರ್ವಧರ್ಮಿಯರನ್ನೂ ಸಮಾನವಾಗಿ ಕಂಡು ಮಾದರಿಯಾಗಿ ಮತ್ತು ಸಹಕಾರಿಯಾಗಿ ಮುನ್ನಡೆಯುತ್ತಿರುವ ಮಲ್‌ಜಅ ಕೇಂದ್ರದ ಕಾರ್ಯ ಚಟುವಟಿಕೆಗೆ ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದೂ ಅವರು ಈ ವೇಳೆ ಘೋಷಿಸಿದರು.
ಹಿಂದೂಗಳ ಕಾರ್ಯಕ್ರಮದಲ್ಲಿ ಮುಸಲ್ಮಾನರಿಗೂ ಸಹಕಾರ ನೀಡುವಂತಾಗಲಿ: ಶಾಸಕ ಬಂಗೇರ
ಇಲ್ಲಿ ಪ್ರತಿ ತಿಂಗಳು 50 ರಷ್ಟು ಹಿಂದೂ ಕುಟುಂಬಗಳೂ ಸೇರಿದಂತೆ 750  ಕುಟುಂಬಗಳು ಮಾಸಿಕ ಅಕ್ಕಿಯ ನೆರವು ಪಡೆಯುತ್ತಿದ್ದು ಅವರಿಗೂ ಈ ರಂಝಾನ್ ಸ್ಪೆಷಲ್ ದವಸ ಧಾನ್ಯಗಳ ಕಿಟ್ಟ್ ವಿತರಣೆ ಮಾಡಲಾಗುತ್ತಿದ್ದು ಇದರಿಂದ ಪ್ರೇರಣೆ ದೊರೆತು ಮುಂದಕ್ಕೆ ಹಿಂದೂಗಳೂ ನಡೆಸುವ ಕಾರ್ಯಕ್ರಮಗಳಲ್ಲಿ ಮುಸಲ್ಮಾನರಿಗೂ ಸಹಕಾರ ನೀಡುವಂತಾಗಲಿ ಎಂದು ಶಾಸಕ ವಸಂತ ಬಂಗೇರ ಆಶಿಸಿದರು. ನಮ್ಮ ಭಕ್ತಿ ಎಂದೂ ನೈಜತೆಯಿಂದ ಕೂಡಿರಬೇಕು ಎಂದ ಅವರು ಮಲ್‌ಜಅ ಸಂಸ್ಥೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಸಂತೋಷದಾಯಕ ಎಂದರು.
ಅತಿಥಿಗಳಿಂದ ಶುಭಾಶಂಸನೆ : ಉಜಿರೆ ಸಂಧ್ಯಾ ಟ್ರೇಡರ‍್ಸ್‌ನ ಮಾಲಿಕ ರಾಜೇಶ್ ಪೈ, ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಉದ್ಧರಿಸಿ ಶುಭಾಶಂಸನೆಗೈದರು. ಸಮಾರಂಭದಲ್ಲಿ ಸಾದಾತ್ ತಂಙಳ್ ಉಪ್ಪಿನಂಗಡಿ, ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರೂ ಆಗಿರುವ ನ್ಯಾಷನಲ್ ಮುಹಮ್ಮದ್ ಶರೀಫ್ ಹಾಜಿ ತೀರ್ಥಹಳ್ಳಿ, ಫಾರೂಕ್ ಉಳ್ಳಾಲ್, ವಲಯ ಅರಣ್ಯಾಧಿಕಾರಿ ಸುಂದರ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ ಉಜಿರೆ ರೇಂಜ್‌ನ ಕುಮಾರ ಸ್ವಾಮಿ ಮತ್ತು ಬೆಳ್ತಂಗಡಿ ರೇಂಜ್‌ನ ಉಲ್ಲಾಸ್, ಮಲ್‌ಜಅ ಸಂಸ್ಥೆಯ ಮುದರ್ರಿಸರುಗಳಾದ ಆಸಿಫ್ ಅಹ್‌ಸನಿ ಮತ್ತು ಹನೀಫ್ ಅಹ್‌ಸನಿ, ಸುಲೈಮಾನ್ ಕುಂಟಿನಿ, ಸಂಶುದ್ದೀನ್ ಜಿದ್ದ, ಕುಂತೂರು, ಬಶೀರ್ ಮೂರುಗೋಳಿ ರಿಯಾದ್, ಹಮೀದ್ ಹಾಜಿ ಕುಂದಾಪುರ, ಅಬ್ಬಾಸ್ ಹಾಜಿ ಉಳ್ಳಾಲ, ಶರೀಫ್ ಬಾಖವಿ ಕಾಟಿಪಳ್ಳ, ಅಬೂಬಕ್ಕರ್ ಹಾಜಿ ಹಾಲಾಡಿ, ಮೊದಲಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಅಧ್ಯಕ್ಷ ಎಂ.ಎ. ಇಸ್ಮಾಯಿಲ್ ಸಅದಿ ಮಾಚಾರ್ ಉದ್ಘಾಟನೆ ನೆರವೇರಿಸಿದರು. ಮಲ್‌ಜಅ ಸಾರಥಿ ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ದುಆ ಪ್ರಾರ್ಥನೆಗೆ ನೇತೃತ್ವ ನೀಡಿ ಸಂಸ್ಥೆಯ ಆಶಯ ನುಡಿಗಳನ್ನಾಡಿದರು. ಪತ್ರಕರ್ತ ಲ| ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು ಮಲ್‌ಜಅ ಜನರಲ್ ಮನೇಜರ್ ಶರೀಫ್ ಬೆರ್ಕಳ ವಂದಿಸಿದರು. ಸುಮಾರು ೩೨ ಬಗೆಯ ಆಹಾರ ಸಾಮಾಗ್ರಿಗಳನ್ನೊಳ ಗೊಂಡ ೫೨ಕೆ.ಜಿ. ತೂಕದ ಕಿಟ್ಟನ್ನು 1200 ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.