ಹೊಸಂಗಡಿ: ಅಕ್ರಮ ಮರಳು ಗಣಿಗಾರಿಕಾ ದಂಧೆ ಗಣಿ-ಭೂ ವಿಜ್ಞಾನ ಇಲಾಖಾಧಿಕಾರಿಗಳ ದಾಳಿ

Advt_NewsUnder_1
Advt_NewsUnder_1
Advt_NewsUnder_1

marallu 1

maralu

   ಅಕ್ರಮವಾಗಿ ಸಂಗ್ರಹಿಸಿಡಲಾಗಿರುವ ಲಕ್ಷಾಂತರ ರೂ. ಮೌಲ್ಯದ ಮರಳು ರಾಶಿಗಳು

ಲಕ್ಷಾಂತರ  ರೂ. ಮೌಲ್ಯದ ಮರಳು ದಾಸ್ತಾನು ಪತ್ತೆ; ಆರೋಪಿಗಳು ನಾಪತ್ತೆ

ಅಕ್ರಮ ಮರಳುಗಾರಿಕೆಗಳ ಬಗ್ಗೆ ಗ್ರಾಮಸಭೆಯಲ್ಲಾಗಲಿ ಅಥವಾ ಪಂಚಾಯತ್‌ಗಾಗಲಿ ಈವರೆಗೆ ಲಿಖಿತ ದೂರು ಬಂದಿಲ್ಲ. ನಿನ್ನೆ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಅಕ್ರಮದ ಬಗ್ಗೆ ಗೊತ್ತಾಯಿತು.
-ಹೇಮಾವಸಂತ್
ಅಧ್ಯಕ್ಷರು, ಗ್ರಾ.ಪಂ ಹೊಸಂಗಡಿ

ಹೊಸಂಗಡಿ: ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಕೊಡಮಣಿಯ ಚೆನ್ನಪ್ಪ ಹೆಗ್ಡೆಯವರ ಪುತ್ರ ರಮೇಶ್ ಹೆಗ್ಡೆಯವರ ಸ.ನಂ. 251/252 ಜಾಗದಲ್ಲಿ ಸುಮಾರು 600 ಕ್ಯುಬಿಕ್ ಮೀಟರ್‌ನಷ್ಟು ಅಕ್ರಮವಾಗಿ ಮರಳು ದಾಸ್ತಾನು ಮಾಡಲಾಗಿರುವುದು ಪತ್ತೆಯಾಗಿದೆ.
ಅಶೋಕ್ ಕುಮಾರ್ ಶೆಟ್ಟಿ, ಲಕ್ಷ್ಮಣ ರಾವ್, ಜಿನ್ನಮ್ಮ ಹಾಗೂ ಕಮಲರವರಿಗೆ ಸೇರಿದ ಜಾಗದಲ್ಲಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮರಳು ಸಂಗ್ರಹಿಸಲಾಗಿರುವುದು ಅಧಿಕಾರಿಗಳ ದಾಳಿ ವೇಳೆ ಪತ್ತೆಯಾಗಿದೆ. ಇದಲ್ಲದೆ ಸರ್ಕಾರಿ ಜಮೀನಿನ ಕಾಡು ಪ್ರದೇಶಗಳೊಳಗೆ ಟನ್ ಗಟ್ಟಲೆ ಮರಳು ರಾಶಿ ಹಾಕಲಾಗಿದ್ದು, ಅಕ್ರಮ ಮರಳುಗಾರಿಕೆಯ ಬೃಹತ್ ದಂಧೆಗೆ ಇದು ಸಾಕ್ಷಿಯಾಗಿದೆ. ಅದೆಷ್ಟೋ ಸಮಯಗಳಿಂದ ರಾತ್ರಿ ಹಗಲೆನ್ನದೆ ಭೂ ಸಂಪತ್ತನ್ನು ದುಷ್ಕರ್ಮಿಗಳು ದೋಚುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿ ವರ್ಗದವರಿಗಾಗಲಿ ಗೋಚರವಾಗದಿರುವುದು ಸೋಜಿಗದ ಸಂಗತಿಯಾಗಿದೆ. ಅಕ್ರಮ ಗಣಿಗಾರಿಕೆ ನಡೆಸಿ ಪಟ್ಟಾ ಜಮೀನಿನಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಲೋಕೋಪಯೋಗಿ ಇಲಾಖೆ ಹೊರತುಪಡಿಸಿ ಇತರರು ಮರಳನ್ನು ದಾಸ್ತಾನು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿದಲ್ಲದೆ ಸರ್ಕಾರಿ ಸ್ವತ್ತನ್ನು ಕಳ್ಳತನ ಮಾಡಿ ದಾಸ್ತಾನು ಮಾಡಿರುವುದಕ್ಕೆ ಐಪಿಸಿ 379ರಂತೆ ದಾಸ್ತಾನು ಮಾಡಿರುವ ಜಮೀನಿನ ಮಾಲಿಕರ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟಮಟ್ಟದಲ್ಲಿ ಗುರುತಿಸಿಕೊಂಡ ಗ್ರಾಮ: ಹೇಳಿ ಕೇಳಿ ಹೊಸಂಗಡಿ ಗ್ರಾಮ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಪಂಚಾಯತು. ವಿವಿಧ ವಿನೂತನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ, ಮಟ್ಟದಲ್ಲಿ ಹೆಸರು ಗಳಿಸಿ ಹಲವಾರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದೆ. ಇಂತಹ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಅಕ್ರಮ ದಂಧೆಗಳು ಅದೇ ವೇಗದಲ್ಲಿ ರಾತ್ರಿಹಗಲೆನ್ನದೆ ನಡೆಯುತ್ತಿದೆ ಎಂದರೆ ನಂಬಲೇ ಬೇಕು.

ಹೊಸಂಗಡಿ ಮಿನಿ ಬಳ್ಳಾರಿ!: ಬೆಳ್ತಂಗಡಿ ತಾಲೂಕಿನಲ್ಲಿಯೇ ಅತೀ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಪದೇ ಪದೇ ದಾಳಿಗಳು ನಡೆಯುತ್ತಲೇ ಇದೆ. ಆದರೆ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬಿದ್ದಿಲ್ಲ. ಇಲ್ಲಿನ ಪ್ರದೇಶದ ವಿವಿಧ ಕಾಡು, ನದಿ ಬದಿಯ ಗದ್ದೆ, ನಿರ್ಜನ ಪ್ರದೇಶಗಳಲ್ಲಿ ಟನ್‌ಗಟ್ಟಲೆ ಮರಳುಗಳ ರಾಶಿಯೇ ಕಂಡು ಬರುತ್ತಿದ್ದು, ಮಿನಿ ಬಳ್ಳಾರಿಯಂತೆ ಗೋಚರವಾಗುತ್ತದೆ. ಈ ರೀತಿಯ ಬೃಹತ್ ಮರಳುಗಾರಿಕೆ ದಂಧೆಗಳಿಂದ ಭೂಮಿಯ ಅಂತರ್ಜಲ ಮಟ್ಟ ಕುಸಿಯಲು ಮುಖ್ಯ ಕಾರಣವಾಗಿದ್ದು, ಇನ್ನಾದರೂ ದುಷ್ಕರ್ಮಿಗಳ ಅಕ್ರಮ ಚಟುವಟಿಕೆಗೆ ಬ್ರೇಕ್ ಬೀಳುತ್ತಾ ಕಾದುನೋಡಬೇಕು.
ದಾಳಿಯಲ್ಲಿ ಮಂಗಳೂರು ಗಣಿ ಮತ್ತು ಭೂ ಇಲಾಖೆಯ ಭೂ ವಿಜ್ಞಾನಿ ಬಿ.ಕೆ. ಮೂರ್ತಿ, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಡಾ| ಕೆ.ವಿ. ರಾಜೇಂದ್ರ, ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಪ್ರಭಾರ ಅಭಿಯಂತರರಾದ ಶಿವಪ್ರಸಾದ ಅಜಿಲ, ವೇಣೂರು ವಲಯ ಕಂದಾಯ ನಿರೀಕ್ಷಕ ಪ್ರತೀಕ್ಷ್, ಗ್ರಾಮಕರಣಿಕ ಸುಜಿತ್ ಕುಮಾರ್, ವೇಣೂರು ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಲೋಲಾಕ್ಷ ಕೆ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.