“ಅನುಗ್ರಹ” ವೃತ್ತಿ ತರಬೇತಿ ಕೇಂದ್ರದ ಮೊದಲ ಶಾಖೆ ಈಗ ಮಂಗಳೂರಿನಲ್ಲಿ ಪ್ರಾರಂಭ

anughra trining college copyಬೆಳ್ತಂಗಡಿ: ಇಲ್ಲಿನ ಸರಕಾರಿ ಪ್ರವಾಸಿ ಬಂಗಲೆ(ಐ.ಬಿ) ರಸ್ತೆಯಲ್ಲಿರುವ ನಗರ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾರಂಭಿಸಿ ಮುನ್ನಡೆಯುತ್ತಿರುವ ಶೇಕಡ ನೂರರಷ್ಟು ಉದ್ಯೋಗ ಅವಕಾಶ ಇರುವ ಐ. ಟಿ. ಐ, ಫ್ಯಾಶನ್ ಡಿಸೈನಿಂಗ್ ಮತ್ತು ವಿವಿಧ ಡಿಪ್ಲೋಮಾ ಕೋರ್ಸ್‌ಗಳ ಅಧ್ಯಯನ ತರಬೇತಿ ಸಂಸ್ಥೆ “ಅನುಗ್ರಹ” ಟ್ರೈನಿಂಗ್ ಕಾಲೇಜು ಇದರ ಮೊದಲ ಶಾಖೆಯು ಮಂಗಳೂರು ತಾಲೂಕು ನಾಟೆಕಲ್ ಯುನಿವರ್ಸಿಟಿ ರಸ್ತೆಯ ಫಾತಿಮಾ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಆರಂಭವಾಗಿದ್ದು ದಾಖಲಾತಿ ಪ್ರಕ್ರೀಯೆಗೆ ಚಾಲನೆ ನೀಡಲಾಯಿತು.
ಕಜೆ ಮುದರ್ರಿಸ್ ಇಬ್ರಾಹಿಂ ಫೈಝಿ ದಾಖಲಾತಿಗೆ ಚಾಲನೆ ನೀಡಿದರು. ಈ ಸಂದರ್ಭ ಸಂಸ್ಥೆಯ ಪ್ರಾಂಶುಪಾಲರ ತಂದೆ ಯೂಸುಫ್ ಸವಣಾಲು, ಇಸ್ಮಾಯಿಲ್ ಬೆಳ್ತಂಗಡಿ, ಅಬ್ದುಲ್ ರಶೀದ್ ನಯೀಮಿ ಬೆಂಗಳೂರು, ಇಲ್ಯಾಸ್ ಸಖಾಫಿ ನಾಟೆಕಲ್, ಮುಹಮ್ಮದ್ ಇರ್ಫಾನ್ ಮೊದಲಾದವರು ಉಪಸ್ಥಿತರಿದ್ದರು. ತರಭೇತಿ ಮುಖ್ಯಸ್ಥ ಖಾಲಿದ್ ವಂದಿಸಿದರು. ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಂಶುಪಾಲ ತಲ್‌ಹತ್ ಎಂ. ಜಿ ಸ್ವಾಗತಿಸಿ ಪ್ರಸ್ತಾವನೆಗೈದರು.
ಈಗಾಗಲೇ ಅನುಗ್ರಹ ಟ್ರೈನಿಂಗ್ ಕಾಲೇಜು ಸಂಸ್ಥೆಯು ಪ್ರಖ್ಯಾತ ಬ್ರಾಂಡ್‌ಗಳ ಮೂರು ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ತರಭೇತಿ ಪಡೆದ ಎಲ್ಲರಿಗೂ ಖಚಿತ ಉದ್ಯೋಗ ಭರವಸೆ ಯೊಂದಿಗೆ ಮುನ್ನಡಿಯಿಡುತ್ತಿದೆ. ಅತ್ಯಾಧುನಿಕ ಯಂತ್ರಗಳು ಬಂದಿದ್ದು ಪ್ರಾಕ್ಟಿಕಲ್ ಮೂಲಕವೇ ತರಭೇತಿ ನಡೆಯಲಿದೆ. ಸಂಸ್ಥೆಯ ಪ್ರಾಂಶುಪಾಲ ಎಂ. ಜಿ ತಲ್‌ಹತ್ ಸವಣಾಲು ಈ ಬಗ್ಗೆ ಅನುಭವಿಯಾಗಿದ್ದು ಈ ಹೊಸ ತರಬೇತಿ ಸಂಸ್ಥೆಯನ್ನು ತಾಲೂಕಿಗೆ ಮೊತ್ತಮೊದಲಬಾರಿಗೆ ಪರಿಚಯಿಸಿ ಯಶಸ್ವಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.