ಕ್ರಿಸ್ಟ್ ಅಕಾಡಮಿಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಉದ್ಘಾಟನೆ

c

c1

c2

c4

c6 ಮುಂಡಾಜೆ: ಇಲ್ಲಿನ ಅರಸಮಜಲು ತಿರುವು ರಸ್ತೆ ಬಳಿ ಇರುವ ನಿರ್ಮಲ ಸದನದಲ್ಲಿ ಕ್ರಿಸ್ಟ್ ಅಕಾಡಮಿ ವತಿಯಿಂದ ಆಂಗ್ಲ ಭಾಷಾ ಪೂರ್ವ ಪ್ರಾಥಮಿಕ ಶಿಕ್ಷಣ ಬೋಧಿಸುವ ಎಲ್. ಕೆ. ಜಿ ಮತ್ತು ಯು. ಕೆ. ಜಿ ತರಗತಿಗಳ ಉದ್ಘಾಟನೆಯು ಜೂ. 6 ರಂದು ಜರುಗಿತು.
ಸಿಎಮ್‌ಐ ಪ್ರೋವೆನ್ಶಿಯಲ್ ಮೈಸೂರು ಅವರ ಪ್ರಾಯೋಜಕತ್ವದ ಈ ಅಕಾಡಮಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ರೆ| ಫಾ| ಬೇಬಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ಶಾಲಿನಿ ವಿಜಯ ಕುಮಾರ್, ಮುಂಡಾಜೆ ಮಸ್‌ಲಕ್ ಅರೆಬಿಕ್ ಶಾಲಾ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಸಖಾಫಿ ಕಬಕ, ಮುಂಡಾಜೆ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್. ಎಸ್ ಗೋಖಲೆ, ಸಂಸ್ಥೆಯ ಮಾರ್ಗದರ್ಶಕರಾದ ಪಿ. ಸಿ ಸೆಬಾಸ್ಟಿಯನ್, ಸೈಂಟ್ ಥಾಮಸ್ ಎಜುಕೇಶನ್ ಸೊಸೈಟಿ ಮೈಸೂರು ಇಲ್ಲಿನ ಫಾ| ಸೂರಜ್, ಪೋಷಕರಾದ ಅನಂತ ಭಟ್ ಮಚ್ಚಿಮಲೆ, ಅಬ್ಬಾಸ್ ಸಿ ಮೊದಲಾದವರು ಉಪಸ್ಥಿತರಿದ್ದರು. ನೂತನವಾಗಿ ಪ್ರಾರಂಭವಾಗಿರುವ ಶಾಲೆಯಲ್ಲಿ ಮಕ್ಕಳಿಗೆ ಹವಾನಿಯಂತ್ರಿಕ ಕಲಿಕಾ ಕೊಠಡಿಗಳು, ಅತ್ಯಾಧುನಿಕ ಶೈಲಿಯಲ್ಲಿ ಬೋಧನಾ ಕ್ರಮ, ವೈಶಿಷ್ಟ್ಯಭರತಿ ಕಲಕಾ ಸಾಧನಗಳು ಇತ್ಯಾಧಿ ಮಕ್ಕಳಿಗೆ ಪ್ರಿಯವಾದ ವಾತಾವರಣ ನಿರ್ಮಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.