ಜೂ. 11: ಮಾಜಿ ಪ್ರಧಾನಿ ದೇವೇಗೌಡರಿಂದ ಜಾಗೃತಿ ಸೌಧ ಕಟ್ಟಡ-ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

jagruthi soudha copy ಲಾಯಿಲ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್, ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಕ್ಷಯ ರೋಗದ ಸಮಸ್ಯೆಗೆ ಕಾರಣವಾಗುವ ಮದ್ಯಪಾನ ಮುಕ್ತ ಮಾದಕವಸ್ತುಗಳ ತಡೆಗಟ್ಟುವಿಕೆಗಾಗಿ ಜಾಗೃತಿ ಸೌಧ ಕಟ್ಟಡ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋದನಾ ಕೇಂದ್ರವು ಜೂ.11ರಂದು ಲಾಲ ಟಿ.ಬಿ. ಕ್ರಾಸ್ ಬಳಿ ಲೋಕಾರ್ಪಣೆಗೊಳ್ಳಲಿದೆ.
ವೇದಿಕೆಯು ಪ್ರಮುಖವಾಗಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ, ವ್ಯಸನಿಗಳಿಗೆ ಸಮುದಾಯ ಚಿಕಿತ್ಸಾ ಶಿಬಿರಗಳು, ವಿದ್ಯಾರ್ಥಿ ಸಮುದಾಯಕ್ಕೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸುತ್ತಿದೆ. ಇದುವರೆಗೆ 925 ಮಧ್ಯವರ್ಜನ ಶಿಬಿರ, 75,000ಕ್ಕೂ ಮಿಕ್ಕಿ ಜನರಿಗೆ ವ್ಯಸನಮುಕ್ತರಾಗಲು ಚಿಕಿತ್ಸೆ , ಸಲಹೆ ನೀಡಿದೆ.
ಇಲ್ಲಿ ಸದ್ಯಕ್ಕೆ ತಿಂಗಳಿಗೆ 2ರಂತೆ ವಿಶೇಷ ಶಿಬಿರಗಳನ್ನು ನಡೆಸಲು ಉದ್ದೇಶಿಸಿದ್ದು, ಪ್ರಚಾರ ಬಯಸದೆ ಗೌಪ್ಯವಾಗಿ ಇಲ್ಲಿ ಕುಡಿತ ಬಿಡಿಸುವ ವಿಶೇಷ ಶಿಬಿರಗಳನ್ನು ಇಲ್ಲಿ ಆಯೋಜಿಸಲಾಗಿದೆ. ಈ ಹಿಂದೆ ಇಲ್ಲಿ 70 ವಿಶೇಷ ಶಿಬಿರದಲ್ಲಿ ವಿಶೇಷ ಗಣ್ಯರು, ವೈದ್ಯರು, ಇಂಜಿನಿಯರ್, ಜನಪ್ರತಿನಿಧಿ ಗಳು ಇಲ್ಲಿ ಭಾಗವಹಿಸಿ ಇದರ ಸದುಪ ಯೋಗ ಪಡೆದುಕೊಂಡಿರುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಲ್ಲಿ ಮನೋದೈಹಿಕ ಚಿಕಿತ್ಸೆ ನೀಡಲಾಗುತ್ತಿದ್ದು, 8 ದಿನಗಳ ಶಿಬಿರವಾಗಿರುತ್ತದೆ. ಇಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ 90 ವಿಶೇಷ ಬೆಡ್‌ಗಳು, ಕ್ಯಾಂಟಿನ್, ಹಾಲ್, ರೂಂಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಕಿತ್ಸಾ ವಿಶೇಷ ಕೊಠಡಿಗಳ ನ್ನೊಳಗೊಂಡ ರೂ. ೩ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ನೂತನ ಕಟ್ಟಡವನ್ನು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ ಉದ್ಘಾಟಿಸಲಿ ರುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು, ಆರೋಗ್ಯ ಸಚಿವ ಯು.ಟಿ. ಖಾದರ್ ಸಭಾಭವನದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಕಿರುಚಿತ್ರ ಬಿಡುಗಡೆ, ಶಾಸಕ ಕೆ. ವಸಂತ ಬಂಗೇರ ರಜತ ಸಂಭ್ರಮ ಪುಸ್ತಕ ಬಿಡುಗಡೆ ಮಾಡುವರು. ವಿವಿಧ ಕ್ಷೇತ್ರದ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.