5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಮುದಾಯ ಭವನ ಡಿಸೆಂಬರ್‌ನಲ್ಲಿ ಲೋಕಾರ್ಪಣೆ

sacred heart church hall copy ಮಡಂತ್ಯಾರು : ಇಲ್ಲಿಯ ಸೇಕ್ರೆಡ್ ಹಾರ್ಟ್ ಚರ್ಚ್ ಇದರ ಆಶ್ರಯದಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನದ ಕಾಮಗಾರಿ ಪ್ರಗತಿಯಲ್ಲಿದೆ.
ಹಲವಾರು ವರ್ಷಗಳಿಂದ ಮಡಂತ್ಯಾರಿನ ಜನತೆಯ ಬೇಡಿಕೆಯಾಗಿರುವ ಈ ಸಮುದಾಯ ಭವನ 2016 ಡಿ.17ರಂದು ಲೋಕಾರ್ಪಣೆಗೊಳ್ಳಲಿದೆ. ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಮತ್ತು ಸಾರ್ವಜನಿಕರ ಅಗತ್ಯತೆಗಳಿಗೆ ಅನುಕೂಲಕರವಾಗಿ ಅತ್ಯಾಧುನಿಕ ವಿನ್ಯಾಸದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸುಮಾರು 2000 ಆಸನಗಳುಳ್ಳ 2 ಹಾಲ್‌ಗಳು ಇಲ್ಲಿ ಸೇವೆಗೆ ಲಭ್ಯವಾಗಲಿದೆ.
ಏಕಕಾಲದಲ್ಲಿ 2 ಸಮಾರಂಭಗಳನ್ನು ನಡೆಸಲು ಅವಕಾಶವಿದ್ದು, ಮದುವೆ ಹಾಗೂ ಇನ್ನಿತರ ಸಭೆ ಸಮಾರಂಭಗಳನ್ನು ನಡೆಸಲು ಸಾರ್ವಜನಿಕರಿಗೆ ಈ ಸಮುದಾಯ ಭವನ ಲಭ್ಯವಾಗಲಿದೆ.
ಇಷ್ಟೊಂದು ವಿಶಾಲವಾದ ಮತ್ತು ಸುಸಜ್ಜಿತವಾದ ಈ ಸಭಾಭವನ ಬೆಳ್ತಂಗಡಿ ತಾಲೂಕಿಗೆ ಪ್ರಥಮವೆನಿಸುವಂತ ರೀತಿಯಲ್ಲಿ ನಿರ್ಮಾಣವಾಗುತ್ತಲಿದೆ.
ಕಳೆದ ವರ್ಷ ಜೂ. 3ರಂದು ಇದರ ಶಿಲಾನ್ಯಾಸ ನೆರವೇರಿದ್ದು ಈಗಾಗಲೇ ಚರ್ಚ್ ಕುಟುಂಬದಿಂದ 1.20 ಕೋಟಿ ದೇಣಿಗೆ ಸಂಗ್ರಹವಾಗಿದ್ದು, ಸರಕಾರದಿಂದ 25 ಲಕ್ಷ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ದೇಣಿಗೆ ಸಂಗ್ರಹವಾಗಿರುತ್ತದೆ ಎಂದು ನಿರ್ಮಾಣ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.
ಇನ್ನು ಅನೇಕ ಭಕ್ತಾದಿಗಳು ಹಾಗೂ ಉದಾರ ದಾನಿಗಳು ದೇಣಿಗೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಂಗಡ ಬುಕ್ಕಿಂಗ್‌ಗಾಗಿ ಕಟ್ಟಡ ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.