ಮಂಜೊಟ್ಟಿಯಲ್ಲಿ ರೂ.1.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪವಿತ್ರ ಶಿಲುಬೆ ಚರ್ಚ್‌ಗೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1

church silanyasa 2 copy

church silanyasa 4 copy

church silanyasa copy

ನಡ: ಇಲ್ಲಿ 1993ರಲ್ಲಿ ಸ್ಥಾಪನೆಗೊಂಡ ಪವಿತ್ರ ಶಿಲುಬೆ ಚರ್ಚ್‌ನ ನೂತನ ಕಟ್ಟಡಕ್ಕೆ ಮಂಗಳೂರಿನ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಎಲೋಸಿಯಸ್ ಪೌಲ್ ಡಿಸೋಜ ಇವರು ಜೂ.1ರಂದು ಶಿಲಾನ್ಯಾಸ ನೆರವೇರಿಸಿದರು.
ಬೆಳ್ತಂಗಡಿ ಹೊಲಿ ರೆಡೀಮಾರ್ ಚರ್ಚ್‌ಗೆ ಒಳಪಟ್ಟ ಈ ಚರ್ಚ್ ಕ್ರೈಸ್ತ ಭಕ್ತಾದಿಗಳಿಗೆ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಲು ದೂರವಾಗಿರುವುದರಿಂದ 1992ರಲ್ಲಿ ಇಲ್ಲಿಯ ಹಿಲಾರಿ ಡಿಸೋಜ ಜಾಗವನ್ನು ಚರ್ಚ್‌ಗೆ ಉದಾರವಾಗಿ ದಾನ ನೀಡಿದ್ದು 1993ರಲ್ಲಿ ಇಲ್ಲಿ ಸಣ್ಣದೊಂದು ಚರ್ಚ್ ಸ್ಥಾಪನೆಗೊಂಡಿತ್ತು. ಇದೀಗ ಜನಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತು ಇಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಸಮರ್ಪಕವಾಗಿಲ್ಲದ ಕಾರಣ ಇಲ್ಲಿ ರೂ.1.25 ಕೋಟಿ ವೆಚ್ಚದಲ್ಲಿ ನೂತನ ಚರ್ಚ್‌ನ ಕಟ್ಟಡ ನಿರ್ಮಾಣವಾಗಲಿದೆ. ಇಲ್ಲಿ ಏಸು ಸ್ವಾಮಿ ವಾಸ ಮಾಡಲಿದ್ದಾರೆ. ನಿಮಗೆ ಅಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸೇವೆ ಲಭಿಸಲಿದೆ ಎಂದು ಬಿಷಪ್ ನುಡಿದರು. ತಾವೆಲ್ಲರೂ ಒಟ್ಟಿಗೆ ದುಡಿದು, ಉದಾರ ದಾನಿಗಳಿಂದ ಈ ಕಟ್ಟಡ ಪೂರ್ಣಗೊಳ್ಳಲಿ. ಏಸುವಿನ ಪವಿತ್ರ ಶಿಲುಬೆಗೆ ಅರ್ಪಿಸಿದ ಈ ಚರ್ಚ್ ಬೆಳಗಲಿ. ಯಾವತ್ತೂ ನಿಮಗೆ ಇಲ್ಲಿಂದ ಧಾರ್ಮಿಕ ಸೇವೆ ಲಭಿಸಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸ್ಮಶಾನದ ಜಾಗವನ್ನು ಆಶೀರ್ವದಿಸಿದರು. ಈ ಸಂದರ್ಭ ಆಗಮಿಸಿದ ಬಿಷಪ್‌ರನ್ನು ಆಂಟನಿ ವೇಗಸ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಬೆಳ್ತಂಗಡಿ ಹೊಲಿ ರೆಡಿಮರ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ. ಫಾ| ಬೊನವೆಂಚರ್ ನಜ್ರೆತ್, ಸಹಾಯಕ ಧರ್ಮಗುರು ವಂ. ಫಾ| ವಿಲಿಯಂ, ಪಾಲನಾ ಸಮಿತಿ ಉಪಾಧ್ಯಕ್ಷ ಜಾನ್ ಅರ್ವಿನ್ ಡಿಸೋಜ, ಕಾರ್ಯದರ್ಶಿ ಎಲೋಸಿಯಸ್ ಲೋಬೊ, ವಾಳೆಯ ಗುರಿಕಾರರಾದ ಮಾರ್ಕ್ ಡಿಸೋಜ, ವಿಜಯ್ ಸುಜಿತ್ ಪೌಲ್, ಬ್ಯಾಪ್ಟಿಸ್ಟ್ ಮಿರಾಂದ, ಪ್ರತಿನಿಧಿಗಳಾದ ಆಂಟಿನಿ ವೇಗಸ್, ಮೋಲಿ ಡಿಸೋಜ, ಗೀತಾ ಡಿಸೋಜ, ಗ್ರೆಟ್ಟಾ ಸೆರಾವೊ, ಮಾಥಾಯಸ್ ಪತ್ರಾಂವೊ, ಸ್ಥಳ ದಾನ ಮಾಡಿದ ಪರವಾಗಿ ಪ್ರಾನ್ಸಿಸ್ ಡಿಸೋಜ, ಪಟ್ಟಣ ಪಂಚಾಯತ್ ಸದಸ್ಯರಾದ ಜೇಮ್ಸ್ ಡಿಸೋಜ, ಸಂತ ತೆರೇಸಾ ಕಾನ್ವೆಂಟಿನ ಧರ್ಮ ಭಗಿನಿಯರು, ಕಥೊಲಿಕ್ ಬ್ಯಾಂಕಿನ ಅಧ್ಯಕ್ಷ ಹೆನ್ರಿ ಲೋಬೊ. ನಿರ್ದೇಶಕ ಲಾರೆನ್ಸ್ ಡೇಸಾ, ಗ್ರೆಗರಿ ಡಿಸೋಜ, 20 ವರ್ಷ ಆಡಳ್ತೆದಾರರಾಗಿ ಸೇವೆ ಸಲ್ಲಿಸಿದ ದಿ| ಇನಾಸ್ ಡಿಸೋಜರವರ ಧರ್ಮಪತ್ನಿ ಮಾರ್ಸೆಲಿನ್ ಡಿಸೋಜ, ಕಾಂಟ್ರಾಕ್ಟರ್ ಮೆಲ್ವಿನ್ ಫೆರ್ನಾಂಡಿಸ್, ವಿಜಯ್ ಲೋಬೊ, ಚರ್ಚ್ ಪಾಲನಾ ಮಂಡಳಿಯ ಸದಸ್ಯರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು. ಫ್ರೆಂಡ್ಸ್ ಕೇಟರರ‍್ಸ್ ಬೆಳ್ತಂಗಡಿ, ವಿಲ್ಸನ್ ಫೋಟೊಗ್ರಾಫರ್, ಡೇಸಾ ಶಾಮಿಯಾನ, ಆಶಾ ಸೌಂಡ್ಸ್‌ನ ಮಾಲಕರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.