ಸಂಯಮ ಮಂಡಳಿಯಿಂದ ಜನಜಾಗೃತಿ ವೇದಿಕೆಯ ಶಿಬಿರಗಳಿಗೆ ಐದು ಲಕ್ಷ ದೇಣಿಗೆ

janajagruthi vedike denige vitarane copy ಧರ್ಮಸ್ಥಳ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ 2016-17 ನೇ ಸಾಲಿನ ಮದ್ಯವರ್ಜನ ಶಿಬಿರಗಳಿಗೆ ಸರಕಾರಿ ಪ್ರಾಯೋಜಿತ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ರೂ.5 ಲಕ್ಷ ದೇಣಿಗೆಯನ್ನು ಮಂಡಳಿಯ ಅಧ್ಯಕ್ಷರಾದ ಎಮ್.ಆರ್.ರಂಗಶಾಮಯ್ಯರವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರಿಗೆ ನೀಡಿದರು. ವೇದಿಕೆಯ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಇವರು ರಾಜ್ಯದಲ್ಲಿ ನಡೆಯುವ ಬಹುತೇಕ ಶಿಬಿರಗಳಿಗೆ ಆಗಮಿಸಿ ಮಾಹಿತಿ ನೀಡುತ್ತಿದ್ದಾರೆ.
ಈ ಸಾಲಿನಲ್ಲಿ 150 ಮಧ್ಯವರ್ಜನ ಶಿಬಿರಗಳ ಕ್ರಿಯಾ ಯೋಜನೆ ಹಾಕಲಾಗಿದ್ದು ಈ ಪೈಕಿ 50 ಶಿಬಿರಗಳಿಗೆ ತಲಾ 10 ಸಾವಿರದಂತೆ ಈ ಹಣವನ್ನು ವಿನಿಯೋಗಿಸ ಲಾಗುವುದೆಂದು ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.