ಬೆಂಕಿಹಚ್ಚಿಕೊಂಡು ಇಳಂತಿಲದ ಮಾನಸಿಕ ಅಸ್ವಸ್ಥೆ ಮಹಿಳೆ ಪದ್ಮಾವತಿ ಆತ್ಮಹತ್ಯೆಗೆ ಶರಣು

  ಇಳಂತಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಾ ಚಿಕಿತ್ಸೆಯಲ್ಲಿದ್ದ ಇಳಂತಿಲ ಗ್ರಾಮದ ಕಾಯರ್‌ಪಾಡಿ ನಿವಾಸಿನಿ ನಾರಾಯಣ ಅವರ ಪತ್ನಿ ಪದ್ಮಾವತಿ (45ವ.) ಅವರು ಮೇ.31 ರಂದು ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.
ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಹೀಗಿರುವಂತೆ 8 ತಿಂಗಳ ಹಿಂದೆ ಔಷಧಿ ತರುವುದನ್ನು ನಿಲ್ಲಿಸಲಾಗಿತ್ತು. ಬಳಿಕ 2 ದಿನಗಳ ಹಿಂದೆ ಔಷಧಿ ತರಲಾಗಿತ್ತು. ಮೇ. 31 ರಂದು ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಆಕೆ ಗಂಭೀರ ಸುಟ್ಟಗಾಯಕ್ಕೊಳಗಾಗಿದ್ದರು. ಇದನ್ನು ಗಮನಿಸಿದ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ವಿಚಾರ ಮುಟ್ಟಿಸಿ ರಕ್ಷಣೆಗೆ ಯತ್ನ ನಡೆಸಿದ್ದರೂ ಪ್ರಯಜನವಾಗದೆ ಅದಾಗಲೇ ಅವರು ಮೃತಪಟ್ಟಿದ್ದರು. ಮತರು ಪತಿ ನಾರಾಯಣ ಸೇರಿದಂತೆ ಇಬ್ಬರು ಪುತ್ರರು, ಏಕೈಕ ಪುತ್ರಿ ಹಾಗು ಬಂಧುಗಳನ್ನು ಅಗಲಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.