೬ ಸಾವಿರ ಮೀಟರ್ ಪೈಲ್‌ಲೈನ್, ಕುಡಿಯುವ ನೀರಿನ ನೂತನ ಕೊಳವೆ ಬಾವಿ ಸೌಲಭ್ಯದ ಉದ್ಘಾಟನೆ

 neriya- nayikatte (1) copy

neriya- nayikatte copyನೆರಿಯ: ಇಲ್ಲಿನ ನಾಯಿಕಟ್ಟೆ ಎಂಬಲ್ಲಿನ ಪ್ರದೇಶದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸಿದ ಶಾಸಕ ವಸಂತ ಬಂಗೇರ ಅವರು ಒದಗಿಸಿದ ವಿಶೇಷ ಅನುದಾನದಲ್ಲಿ ನೂತನವಾಗಿ ಕೊರೆದಿರುವ ಕೊಳವೆಬಾವಿ, ಅದಕ್ಕೆ ಪೂರಕವಾಗಿ ಜಿ. ಪಂ ಅನುದಾನದಿಂದ ಮಾಡಲಾಗಿರುವ ಪೈಪ್‌ಲೈನ್ ಮತ್ತು ವಿದ್ಯುತ್ ಕಾಮಗಾರಿ ಇತ್ಯಾಧಿ, ನೆರಿಯ ಗ್ರಾ.ಪಂ ವತಿಯಿಂದ ಒದಗಿಸಲಾದ ಪಂಪು ವ್ಯವಸ್ಥೆ ಇದರ ಉದ್ಘಾಟನೆಯನ್ನು ಮೇ. ೩೧ ರಂದು ಶಾಸಕ ವಸಂತ ಬಂಗೇರ ಅವರು ನೆರವೇರಿಸಿ ಲೋಕಾರ್ಪಣೆಗೊಳಿಸಿದರು.
ನೀರಿನ ಪಂಪಿನ ಗುಂಡಿ ಅದುಮುವ ಮೂಲಕ ಶಾಸಕರು ಘಟಕಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಉಜಿರೆ ಜಿ.ಪಂ ಸದಸ್ಯೆ ನಮಿತಾ, ನೆರಿಯ ಕ್ಷೇತ್ರದ ತಾ. ಪಂ ಸದಸ್ಯರಾದ ವಿ.ಟಿ ಸೆಬಾಸ್ಟಿಯನ್, ನೆರಿಯ ಗ್ರಾ.ಪಂ ಅಧ್ಯಕ್ಷ ಮುಹಮ್ಮದ್ ಪಿ, ಸದಸ್ಯರಾದ ಅನ್ನಮ್ಮ, ಕಸ್ತೂರಿ, ವಸಂತಿ, ಶೆರ್ಲಿ, ವಿನೋಯ್, ಚಂದ್ರಾವತಿ ಸಂಜೀವ, ಸಂಜೀವ, ಪಿ. ಕೆ ರಾಜನ್, ಗುತ್ತಿಗೆದಾರ ಮೂಸೆಕುಂಞಿ ನೆರಿಯ, ಮೆಸ್ಕಾಂ ಇಲಾಖೆಯ ಸದಸ್ಯರಾದ ರಶೀದ್ ಕಕ್ಕಿಂಜೆ, ಗ್ರಾಮದ ಪ್ರಮುಖರಾದ ಎನ್. ಟಿ ಜೋನಿ, ರಮೇಶ್ ಪಿ. ಥೋಮಸ್ ಕಾಂಜಾಲ್, ಉಮರಬ್ಬ ನಾಯಿಕಟ್ಟೆ, ಮುಂಡಾಜೆ ಗ್ರಾ. ಪಂ ಸದಸ್ಯ ನಾರಾಯಣ ಗೌಡ ದೇವಸ್ಯ, ಸಹಕಾರಿ ಸಂಘದ ಅಧ್ಯಕ್ಷ ಎನ್. ಎಸ್ ಗೋಖಲೆ ಮೊದಲಾದವರು ಉಪಸ್ಥಿತರಿದ್ದರು. ನೆರಿಯ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ ಅಶ್ರಫ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಜನರ ಬೇಡಿಕೆಗೆ ಸ್ಪಂದಿಸಿ ಯೋಜನೆಯನ್ನು ಸಕಾಲದಲ್ಲಿ ವ್ಯವಸ್ಥೆಗೊಳಿಸಿದ್ದಕ್ಕಾಗಿ ಅವರು ಜನರ ಪರವಾಗಿ ಸಂಬಂಧಪಟ್ಟವರಿಗೆ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.