ತೋಟತ್ತಾಡಿ: ಕುಬೇಲ, ಬೋವುಕಾಡ್ ನೀರಿನ ಸೌಲಭ್ಯ ಶಾಸಕರಿಂದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

bangera 3

bangera 5

bangera 6

ತೋಟತ್ತಾಡಿ: ಇಲ್ಲಿನ ಕುಬೇಳ ಬೋವುಕಾಡ್ ಎಂಬಲ್ಲಿ ಆ ಪ್ರದೇಶದ ಜನರ ಬಹುಕಾಲದ ಬೇಡಿಕೆಯ ಸ್ಪಂದನದ ಭಾಗವಾಗಿ ಶಾಸಕರ ಅನುದಾನದಲ್ಲಿ ನೂತನವಾಗಿ ಕೊರೆದಿರುವ ಕೊಳವೆಬಾವಿ, ಜಿ. ಪಂ ಅನುದಾನದಿಂದ ಮಾಡಲಾಗಿರುವ ಪೈಪ್‌ಲೈನ್ ಸೇರಿದಂತೆ ಇತರ ಕಾಮಗಾರಿಯನ್ನು ಜನೋಪಯೋಗಕ್ಕಾಗಿ ಸಮರ್ಪಿಸಿದ ಕಾರ್ಯಕ್ರಮ ಮೇ. 31 ರಂದು ನಡೆಯಿತು. ಶಾಸಕ ವಸಂತ ಬಂಗೇರ ಅವರು ನೀರಿನ ಪಂಪಿನ ಗುಂಡಿ ಒತ್ತುವ ಮೂಲಕ ಉದ್ಘಾಟನೆ ನಡೆಸಿದರೆ, ಉಜಿರೆ ಜಿ.ಪಂ ಸದಸ್ಯೆ ನಮಿತಾ ಅವರು ನಳ್ಳಿ ನೀರನ್ನು ತಿರುಗಿಸುವ ಮೂಲಕ ನೀರು ಬಳಕೆಗೆ ಚಾಲನೆ ನೀಡಿದರು. ಈ ಸಂದರ್ಭ ತಾಲೂಕು ಯುವಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಆಗಿರುವ ಪ್ರದೀಪ್ ಸ್ವಾಗತಿಸಿ ಪ್ರಸ್ತಾವನೆಗೈದರು. ವಾರ್ಡ್‌ನ ಸದಸ್ಯರಾದ ಶಾಜಿ ಟಿ. ಎ, ಅಬೂಬಕ್ಕರ್, ಶೋಭಾ ಮತ್ತು ಶೋಭಾ ಶಿಬಿ, ನೆರಿಯ ಕ್ಷೇತ್ರದ ತಾ.ಪಂ ಸದಸ್ಯರ ವಿ. ಟಿ ಸೆಬಾಸ್ಟಿಯನ್, ಮೆಸ್ಕಾಂ ಇಲಾಖೆಯ ಸದಸ್ಯರಾದ ರಶೀದ್ ಕಕ್ಕಿಂಜೆ, ಗ್ರಾಮದ ಪ್ರಮುಖರಾದ ಸಂತೋಷ್ ಸಿ. ಜೆ, ಅಮಿತ್, ಸನ್ನಿ, ಸಂತೋಷ್, ಜೋಸ್, ಅಂತೋಣಿ, ಎನ್. ಟಿ ಜೋನಿ, ಮುಂಡಾಜೆ ಗ್ರಾ. ಪಂ ಸದಸ್ಯ ನಾರಾಯಣ ಗೌಡ ದೇವಸ್ಯ, ಸಹಕಾರಿ ಸಂಘದ ಅಧ್ಯಕ್ಷ ಎನ್. ಎಸ್ ಗೋಖಲೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.