ಮಾಜಿ ಶಾಸಕರ ಪಿಂಚಣಿ ವಿವರ : ಮಾಹಿತಿ ಹಕ್ಕಿನಲ್ಲಿ ವಿಷಯ ಬಹಿರಂಗ

 ಬೆಳ್ತಂಗಡಿ : ಬೆಳ್ತಂಗಡಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕಿನಲ್ಲಿ ಪಡೆದುಕೊಂಡಿದ್ದು ದ.ಕ ಜಿಲ್ಲೆಯ ವಿವಿಧ 12ಮಂದಿ ಮಾಜಿ ಶಾಸಕರಿಗೆ ತಿಂಗಳಿಗೆ ಎಷ್ಟೆಷ್ಟು ಪಿಂಚಣಿ ಬರುತ್ತಿದೆ ಎಂಬುದನ್ನು ತಿಳಿಸಿದ್ದಾರೆ. ವಿಟ್ಲ ಶಾಸಕರಾದ ರುಕ್ಯಯ್ಯ ಪೂಜಾರಿ 50ಸಾವಿರ, ಮೂಡಬಿದ್ರೆ ಶಾಸಕರಾದ ಅಮರನಾಥ ಶೆಟ್ಟಿ 49 ಸಾವಿರ, ಬೆಳ್ತಂಗಡಿ ಶಾಸಕರಾದ ಗಂಗಾಧರ ಗೌಡ, ಸುಳ್ಯ ಶಾಸಕರಾದ ಕುಶಲ.ಕೆ ತಲಾ 45 ಸಾವಿರ, ಬೆಳ್ತಂಗಡಿ ಶಾಸಕರಾದ ಕೆ.ಪ್ರಭಾಕರ ಬಂಗೇರ 44 ಸಾವಿರ, ಪುತ್ತೂರು ಶಾಸಕರಾದ ಉರಿಮಜಲು ರಾಮ ಭಟ್ ಕೆ 42ಸಾವಿರ, ಸುಳ್ಯ ಶಾಸಕರಾದ ಬಾಕಿಲ ಹುಕ್ರಪ್ಪ , ಪುತ್ತೂರು ಶಾಸಕರಾದ ಮಲ್ಲಿಕಾಪ್ರಸಾದ್, ಬಂಟ್ವಾಳ ಶಾಸಕರಾದ ನಾಗರಾಜ ಶೆಟ್ಟಿ, ವಿಟ್ಲ ಶಾಸಕರಾದ ಪದ್ಮನಾಭ ಕೊಟ್ಟಾರಿ ತಲಾ 40 ಸಾವಿರ ರುಪಾಯಿ ಪ್ರತಿ ತಿಂಗಳು ಪಿಂಚನಿ ಪಡೆಯತ್ತಾರೆ.
ಇದಲ್ಲದೆ ವೈದ್ಯಕೀಯ ಖರ್ಚಿಗೆಂದು ತಿಂಗಳಿಗೆ 5ಸಾವಿರ ಸರಕಾರ ನೀಡುತ್ತಿದೆ. 2015 ಏಪ್ರಿಲ್ ತಿಂಗಳಿನಿಂದ 2016 ಮಾರ್ಚ್ ತನಕ ಸರಕಾರದಿಂದ ವಾರ್ಷಿಕ 1 ಲಕ್ಷ ರೂ ಪ್ರಯಾಣ ವೆಚ್ಚವನ್ನು ರಾಮ ಭಟ್. ಕೆ, ಲೋಕಯ್ಯ ನಾಯಕ್, ಕುಶಲ.ಕೆ, ಅಮರನಾಥ್ ಶೆಟ್ಟಿ ಪಡೆದರೆ, ತಲಾ 50 ಸಾವಿರ ಪ್ರಯಾಣ ವೆಚ್ಚವನ್ನು ಗಂಗಾದರ ಗೌಡ, ಪ್ರಭಾಕರ ಬಂಗೇರ ಪಡೆದಿದ್ದಾರೆ ಎಂದು ವಿಧಾನಸಭಾ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಅಧೀನ ಕಾರ್ಯದರ್ಶಿ ಎಚ್.ಎಲ್ ಬುದ್ಧ ಮಾಹಿತಿ ಹಕ್ಕಿನಲ್ಲಿ ವಿವರ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.