ಬೆಳ್ತಂಗಡಿ : ತೋಟಕ್ಕೆ ನುಗ್ಗಿ, ಕಲ್ಲು ಬಿಸಾಡಿ ಹಲ್ಲೆಗೆ ಯತ್ನ : ಆರೋಪಿಗೆ ಜಾಮೀನು ಮಂಜೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ಬೆಳ್ತಂಗಡಿ : ತೋಟಕ್ಕೆ ಅಕ್ರಮವಾಗಿ ನುಗ್ಗಿ ಪಿವಿಸಿ ಪೈಪ್‌ಗಳನ್ನು ಧ್ವಂಸಗೊಳಿಸಿದಲ್ಲದೆ, ಕಲ್ಲು ಬಿಸಾಡಿ ಹಲ್ಲೆಗೆ ಯತ್ನಿಸಿದ ಆರೋಪದಡಿ ವ್ಯಕ್ತಿಯೋರ್ವರಿಗೆ ಬೆಳ್ತಂಗಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮೊಗ್ರು ಗ್ರಾಮದ ಅಂತರಮನೆ ನಿವಾಸಿ ಮೋಂಟ ಗೌಡರವರ ಪುತ್ರ ಮೇದಪ್ಪ ಗೌಡರವರಿಗೆ ಪಕ್ಕದ ಮನೆಯ ನಿವಾಸಿಯಾದ ಮುದರ ಗೌಡರವರ ಪುತ್ರ ಸುಂದರ ಗೌಡರವರು ಕಲ್ಲು ಬಿಸಾಡಿ, ಹಲ್ಲೆಗೆ ಯತ್ನಿಸಿದ್ದು, ಜೊತೆಗೆ ಮೇದಪ್ಪ ಗೌಡರವರ ತೋಟದಲ್ಲಿನ ಪಿವಿಸಿ ಪೈಪ್‌ಗಳನ್ನು ಧ್ವಂಸ ಮಾಡಿದ್ದಾರೆ. ಈ ಆರೋಪದಡಿ ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ನ್ಯಾಯಾಲಯವು ಆರೋಪಿ ಸುಂದರ ಗೌಡರವರಿಗೆ ಜಾಮೀನು ಮಂಜೂರುಗೊಳಿಸಿದೆ. ವಕೀಲರಾದ ಅನಿಲ್ ಕುಮಾರ್ ಉಪ್ಪಿನಂಗಡಿ ಆರೊಪಿ ಪರ ಮತ್ತು ಸಂದೇಶ ನಟ್ಟಿಬೈಲು ವಾದಿಸಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.