ಶಿಕ್ಷಕ ರಾಮ ಪಿ ಸಾಲ್ಯಾನ್ ಅವರಿಗೆ ಪದೋನ್ನತಿಗೊಂಡು ವರ್ಗಾವಣೆ

 Rama Salian copyಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ನಾಳ ಸರಕಾರಿ ಹಿ. ಪ್ರಾ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ರಾಮ ಪಿ ಸಾಲ್ಯಾನ್ ಅವರಿಗೆ ಸ್ನಾತಕೋತ್ತರ ಪದವೀಧರ ಮುಖ್ಯೋಪಾಧ್ಯಾಯರಾಗಿ ಪದೋತನ್ನತಿಯಾಗಿದ್ದು ಬಂಟ್ವಾಳ ತಾಲೂಕು ಉಳಿ ಕಕ್ಯಬೀಡು ಶಾಸಕರ ಉನ್ನತೀಕರಿಸಿದ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸರಕಾರ ನೇಮಕಗೊಳಿಸಿದೆ.
ಬಹುಮುಖ ಪ್ರತಿಭೆಯುಳ್ಳ ಕಲಾವಿದ ಶಿಕ್ಷಕ, ಕ್ರಿಯಾತ್ಮಕ ಚಿತ್ರಕಲೆ, ಕ್ಲೇಮೋಡೆಲಿಂಗ್, ರಂಗಕಲೆ, ಪ್ರಸಾದನ ಕಲೆ, ಮಿಮಿಕ್ರಿ, ಜನಪದ ಕಲೆ, ಮುಖವಾಡ, ಪೇಪರ್ ಕ್ರಾಪ್ಟ್, ಹಾಡು, ಕುಣಿತ, ನಾಟಕಾಭಿನಯ, ಯೋಗಾಸನ, ಕ್ರೀಡೆ, ಕಥೆ, ಕವನ ಮುಂತಾದ ವಿಷಯಗಳಲ್ಲಿ ಪರಿಣತಿ ಹೊಂದಿರುವ ಶಿಕ್ಷಕರಾಗಿರುವ ಅವರು ತಮ್ಮ ವಿದ್ಯಾರ್ಥಿಗಳನ್ನೂ ಈ ಕ್ಷೇತ್ರದಲ್ಲಿ ಒರೆಗೆ ಹಚ್ಚಿ ತಾನೂ ರಾಜ್ಯಮಟ್ಟದ ಸಾಧನೆ ಮಾಡಿದ್ದಲ್ಲದೆ ಮಕ್ಕಳನ್ನೂ ರಾಜ್ಯಮಟ್ಟದವರೆಗೆ ಬೆಳೆಸಿದ ಕೀರ್ತಿ ಹೊಂದಿದವರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.