ಗುರುವಾಯನಕೆರೆಯಲ್ಲಿ ಕುಂಭ ಕಲೋತ್ಸವ ಮಕ್ಕಳಲ್ಲಿರುವ ಪ್ರತಿಭಾ ವಿಕಸನಕ್ಕೆ ಪ್ರೋತ್ಸಾಹ ಅಗತ್ಯ : ಡಾ| ರೋಹಿನಾಥ್

Advt_NewsUnder_1
Advt_NewsUnder_1
Advt_NewsUnder_1

kumbakalasosava copyಗುರುವಾಯನಕೆರೆ : ಕುಲಾಲ ಕುಂಬಾರ ಸಾಂಸ್ಕ್ರತಿಕ ಸಮಿತಿ ಇದರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ ಆಶ್ರಯದಲ್ಲಿ “ಕುಂಭ ಕಲೋತ್ಸವ” ಕಾರ್ಯಕ್ರಮ ಮೇ.೨೨ರಂದು ಕುಲಾಲ ಮಂದಿರ ಗುರುವಾಯನಕೆರೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಶ್ರೀಮತಿ ಮೀರಾ ವಾಸುದೇವ ಪೆರಾಜೆ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ| ರೋಹಿನಾಕ್ಷ ಶಿರ್ಲಾಲು ಅವರು ದಿಕ್ಸೂಚಿ ಭಾಷಣ ಮಾಡಿ, ಜಗತ್ತಿಗೆ ಕುಂಭವನ್ನು ಕಲಿಸಿಕೊಟ್ಟು ನಾಗರಿಕತೆಯನ್ನು ಪರಿಚಯಿಸಿದ ನಮ್ಮ ಸಮಾಜದ ಸಾಂಸ್ಕೃತಿಕ ಪ್ರತಿಭೆಯನ್ನು ಬೆಳಗಿಸಲು ಈ ಕುಂಬೋತ್ಸವ ನಾಂದಿಯಾಗಿದೆ ಎಂದರು. ಸಂಗೀತ ಮತ್ತು ಸಾಹಿತ್ಯ, ಸಾಂಸ್ಕ್ರತಿಕ ಕಲೆಗೆ ತಲೆಭಾಗದ ಜನಾಂಗವೇ ಇಲ್ಲ, ಇಂತಹ ಕಲೆ ರಕ್ತಗತವಾಗಿ ನಮ್ಮ ಕುಲಾಲ, ಕುಂಬಾರ ಜನಾಂಗಕ್ಕೆ ಬಂದಿದೆ. ಇಂದಿನ ಶೈಕ್ಷಣಿಕ ಬದುಕು ಒತ್ತಡದಿಂದ ಕೂಡಿದ್ದು ಅಂಕಗಳ ಧಾವಂತದಲ್ಲಿ ಇಂತಹ ಪ್ರತಿಭೆಗಳು ಮುರುಟಿ ಹೋಗುತ್ತಿದ್ದು, ಈ ಪ್ರತಿಭೆಗಳನ್ನು ಬೆಳಕಿಗೆ ತರುವ ಕುಂಬೋತ್ಸವದಂತಹ ಕಾರ್ಯಕ್ರಮ ಇಂದು ಅಗತ್ಯವಾಗಿ ಆಗಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ವಹಿಸಿ ಮಾತನಾಡಿ, ಹಿಂದೆ ತಾಲೂಕು ಸಂಘವನ್ನು ಕಟ್ಟಲು ಹಲವು ಮಂದಿ ಬಹಳಷ್ಟು ಶ್ರಮಪಟ್ಟಿದ್ದಾರೆ. ಅವರನ್ನು ನೆನಪಿಸುವ ಮತ್ತು ಗೌರವಿಸುವ ಕೆಲಸ ಸಂಘದಿಂದ ನಡೆಯಬೇಕು. ಮಾಜಿ ಅಧ್ಯಕ್ಷ ವಾಸುದೇವ ಪೆರಾಜೆ ಅವರ ಸನ್ಮಾನದ ನಂತರ ತಾಲೂಕು ಸಂಘದಲ್ಲಿ ಯಾವುದೇ ಕಾರ್ಯಕ್ರಮ ನಡೆದಿಲ್ಲ ಈ ಎರಡು ಉದ್ದೇಶಗಳನ್ನು ಇಟ್ಟುಕೊಂಡು ಇಂದು ಕುಂಭ ಕಲೋತ್ಸವ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಇಂದಿನ ಕಾರ್ಯಕ್ರಮದಲ್ಲಿ ಯಾವುದೇ ಸ್ವಾರ್ಥ ಇಲ್ಲ ಸಂಘವನ್ನು ಗಟ್ಟಿಮಾಡುವುದು ಮತ್ತು ಸಮಾಜದ ಮಕ್ಕಳಲ್ಲಿ ಇರುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮೂಲಕ ಸಮಾಜದ ಋಣ ತೀರಿಸುವುದು ನಮ್ಮ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಕುಲಾಲ-ಕುಂಬಾರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮಕುಮಾರ್ ಮಾತನಾಡಿ ಕುಲಾಲ-ಕುಂಬಾರ ಸಮಾಜದ ಯುವಕರು ಆಟೋಟ ಸ್ಪರ್ಧೆ, ಕುಂಭ ಕಲೋತ್ಸವ ಕಾರ್ಯಕ್ರಮ ನಡೆಸುವ ಮೂಲಕ ಸಮಾಜವನ್ನು ಬಲಿಷ್ಠಗೊಳಿಸುವ ಉತ್ತಮ ಕಾರ್ಯ ಮಾಡಿದ್ದಾರೆ. ಯುವಕರ ನಡುವೆ ಕೆಲವೊಂದು ಮನಸ್ತಾಪಗಳಿದ್ದರೂ ಅದು ಮುಂದಕ್ಕೆ ಸರಿಯಾಗುತ್ತದೆ ಎಂದು ತಿಳಿಸಿದರು. ಸಾಮಾಜಿಕ ಕಾರ್ಯಕರ್ತ ಉಮೇಶ್ ನಡ್ತಿಕಲ್ಲು, ಎಸ್.ಎಸ್ ಕನ್ಸಟ್ರಕ್ಷನ್ ಮಾಲಕ ಸೀತಾರಾಮ ಮೂಲ್ಯ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ಕಸ್ತೂರಿ ಟೀಚರ್ ಮಡಂತ್ಯಾರು, ಉಮೇಶ್ ಮಾಲಾಡಿ, ಪರಮೇಶ್ವರ ಮೂಲ್ಯ, ಗಂಗಯ್ಯ ಮೂಲ್ಯ, ವಾಸು ಟೈಲರ್, ಧರ್ಣಮ್ಮ, ಆನಂದ ಮೂಲ್ಯ, ನಂದ ಕುಮಾರ್, ಗಿರೀಶ್ ಮಾಸ್ತರ್, ಕರುಣಾಕರ ಕುಲಾಲ್, ನಾರಾಯಣ ಮೂಲ್ಯ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮೋಹನ್‌ಬಂಗೇರ ಕಾರಿಂಜೆ, ಕೃಷ್ಣಾನಂದ ಕುಲಾಲ್, ಅಣ್ಣಪ್ಪ ಸಾಲ್ಯಾನ್, ಕುಂಜಿರ ಗುರುಸ್ವಾಮಿ ಚಾರ್ಮಾಡಿ, ಸದಾನಂದ ಮೂಲ್ಯ, ಉದಯಕುಮಾರ್ ಬಂದಾರು, ಸಮಿತಿ ಅಧ್ಯಕ್ಷ ಉಮೇಶ್‌ಕುಲಾಲ್, ಉಪಾಧ್ಯಕ್ಷ ಹರೀಶ್ ಪುತ್ಯೆ, ಪ್ರಧಾನ ಕಾರ್ಯದರ್ಶಿ ಜಯರಾಜ್ ಪಕ್ಕಿದಕಲ, ಜೊತೆ ಕಾರ್ಯದರ್ಶಿ ಜಗದೀಶ್ ಮಾಪಲಾಡಿ, ಕೋಶಾಧಿಕಾರಿ ಮೋಹನಂದ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಕು| ಶಿಲ್ಪಾ, ಕು| ಶ್ರೇಯ ಇವರ ಪ್ರಾರ್ಥನೆ ಬಳಿಕ ಸಮಿತಿ ಜೊತೆಕಾರ್ಯದರ್ಶಿ ಅಶ್ಚಿತ್ ಮೂಲ್ಯ ಸ್ವಾಗತಿಸಿದರು. ಅಭಿಜಿತ್ ಕಾರ‍್ಯಕ್ರಮ ನಿರೂಪಿಸಿ, ಪ್ರತಿಭಾ ನಾಗರಾಜ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.